ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | KUMSI NEWS | 4 ಫೆಬ್ರವರಿ 2022
ಬಾಲಕನಿಗೆ ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ತಂದೆ, ತಾಯಿ ಮೇಲೆಯೇ ಹಲ್ಲೆ ನಡೆಸಲಾಗಿದೆ. ಅಲ್ಲದೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಾಲಕನಿಗೆ ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಹಾಕಲಾಗಿದೆ.
ಹೇಗಾಯ್ತು ಘಟನೆ?
ಕೊನಗವಳ್ಳಿಯ ರೂಪಾ, ಆಕೆಯ ಪತಿ ರುದ್ರೇಶ್ ಮತ್ತು ಪುತ್ರ ಪ್ರಮೋದ್ ಹಲ್ಲೆಗೆ ಒಳಗಾದವರು. ಅದೇ ಗ್ರಾಮದ ಉಮೇಶ್, ಶಿಲ್ಪಾ ಮತ್ತು ಕಾಂತಾ ಹಲ್ಲೆ ನಡೆಸಿದವರು.
7ನೇ ತರಗತಿ ಓದುತ್ತಿರುವ ಪ್ರಮೋದ್ ಮಂಗಳವಾರ ಸಂಜೆ ಪಕ್ಕದ ಕೇರಿಯಲ್ಲಿ ನೋಟ್ ಬುಕ್ ತರಲು ಹೋಗಿದ್ದ ವೇಳೆ ಉಮೇಶ್ ಅವರು ಸಾಕಿದ್ದ ನಾಯಿ ಕಚ್ಚಿತ್ತು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರೂಪಾ ಮತ್ತು ರುದ್ರೇಶ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಜತೆಗೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Shivamogga Live | Shimoga Police
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






