ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SHIMOGA CRIME| 27 ಏಪ್ರಿಲ್ 2022
ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಹೊನ್ನಾಳಿ ಸೇತುವೆ ಮೇಲೆ ಯುವಕನೊಬ್ಬನ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಲಾಗಿದೆ.
ರಾಗಿಗುಡ್ಡ ನಿವಾಸಿ ಪವನ್ (20) ಎಂಬಾತನ ಮೇಲೆ ಹಲ್ಲೆಮಾಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಹೋಂಡಾ ಆಕ್ಟೀವಾ ಬೈಕಿನಲ್ಲಿ ಬಂದ ಮೂವರು ಕೃತ್ಯ ಎಸಗಿದ್ದಾರೆ. ಆದರೆ ಘಟನೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.
ಏನಿದು ಪ್ರಕರಣ?
‘ಸಿಟಿ ಕ್ಲಬ್’ನಲ್ಲಿ ಕೆಲಸ ಮುಗಿಸಿ ಪವನ್ ರಾತ್ರಿ ನಡೆದುಕೊಂಡು ಹೊನ್ನಾಳಿ ಸೇತುವೆ ಮೂಲಕ ಮನೆಗೆ ತೆರಳುತ್ತಿದ್ದಾಗ ಹೋಂಡಾ ಆಕ್ಟೀವಾದಲ್ಲಿ ಬಂದ ಮೂವರು ಅಡ್ಡಗಟ್ಟಿದ್ದಾರೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ನಡುರಾತ್ರಿ ಹೊನ್ನಾಳಿ ಸೇತುವೆ ಮೇಲೆ ಪವನ್’ನನ್ನು ಅಡ್ಡಗಟ್ಟಿದ ಮೂವರು ‘ಕಹಾ ಜಾ ರಹ ಹೈ’ ಎಂದು ಪ್ರಶ್ನಿಸಿದ್ದಾರೆ. ಮೂವರ ಪೈಕಿ ಒಬ್ಬಾತ ಇವತ್ತು ನಿನ್ನನ್ನು ಬಿಡುವುದಿಲ್ಲ ಎಂದು ಬೈಕಿನಿಂದ ಕೆಳಗಿಳಿದವನೆ ಮೂಗಿಗೆ ಪಂಚ್ ಕೊಟ್ಟಿದ್ದಾನೆ. ರಕ್ತ ಸುರಿಯುತ್ತಿದ್ದಂತೆ ಕತ್ತು ಹಿಸುಕಿ ಪವನ್ ಹತ್ಯೆ ಮಾಡಲು ಯತ್ನಿಸಿದ್ದಾರೆ.
ಪವನ್ ಜೋರಾಗಿ ಕೂಗಿಕೊಂಡಿದ್ದರಿಂದ ಸಮೀಪದಲ್ಲಿ ಹೋಗುತ್ತಿದ್ದ ಬೈಕ್ ಸವಾರರು ಬಂದು ಜಗಳ ಬಿಡಿಸಿದ್ದಾರೆ. ಗಾಯಗೊಂಡಿದ್ದ ಪವನ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ದುಷ್ಕರ್ಮಿಗಳು 20 ರಿಂದ 30 ವರ್ಷ ವಯಸ್ಸಿನವರು ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಆರೋಪಿಗಳ ಪತ್ತೆಗೆ ಕೋಟೆ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರ್ ಟಯರ್ ಸ್ಪೋಟ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422