SHIVAMOGGA LIVE NEWS, 4 JANUARY 2024
ಶಿವಮೊಗ್ಗ : ಪೌರ ಕಾರ್ಮಿಕನ ಆತ್ಮಹತ್ಯೆ ಯತ್ನ ಪ್ರಕರಣದಿಂದ ಆಕ್ರೋಶಗೊಂಡ ಮಹಾನಗರ ಪಾಲಿಕೆ (Palike) ಸಿಬ್ಬಂದಿ ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಪಾಲಿಕೆ ಗೇಟ್ ಬಂದ್ ಮಾಡಿ ಹೋರಾಟ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪೌರ ಕಾರ್ಮಿಕ ಮೂರ್ತಿ ವಿಷ ಸೇವಿಸುವುದಾಗಿ ಸೆಲ್ಫಿ ವಿಡಿಯೋ ಮಾಡಿ ನಾಪತ್ತೆಯಾಗಿದ್ದರು. ಶುಕ್ರವಾರ ಸಂಜೆ ಹೊತ್ತಿಗೆ ಉಂಬ್ಳೆಬೈಲು ಸಮೀಪ ಮೂರ್ತಿ ಅವರನ್ನು ಪತ್ತೆ ಮಾಡಲಾಗಿತ್ತು. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂರ್ತಿ ಆತ್ಮಹತ್ಯೆಗೆ ಯತ್ನಿಸಲು ಮಾಜಿ ಕಾರ್ಪೊರೇಟರ್ ಪ್ರಭಾಕರ್ ಕಿರುಕುಳವೆ ಕಾರಣ ಎಂದು ಆರೋಪಿ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪಾಲಿಕೆ ನೌಕರರು, ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮಾಜಿ ಕಾರ್ಪೊರೇಟರ್ ಪ್ರಭಾಕರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡದ ಪ್ರಕರಣ ದಾಖಲಿಸಬೇಕು. ಅವರನ್ನು ತಕ್ಷಣ ಬಂಧಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಡೆಯಲಿದೆ. ಶಾಸಕ ಎಸ್.ಎನ್.ಚನ್ನಬಸಪ್ಪ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಈಗಲೂ ಹಾಲಿ ಕಾರ್ಪೋರೇಟರ್ ಎನ್ನುವ ಮನೋಭಾವದಿಂದ ಪ್ರಭಾಕರ್ ನಡೆದುಕೊಂಡಿದ್ದಾರೆ. – ಎನ್.ಗೋವಿಂದ, ಪೌರ ಕಾರ್ಮಿಕರ ಸಂಘದ ಜಿಲಾಧ್ಯಕ್ಷ ಮಹಾನಗರ ಪಾಲಿಕೆಯ ಲೋಡರ್ಸ್, ಕ್ಲೀನರ್‌ಗಳು, ಆರ್.ಒ ಸೆಕ್ಷನ್ ಸಿಬ್ಬಂದಿ ಸೇರಿದಂತೆ ನೌಕರರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪಾಲಿಕೆ ಬಂದ್ ಮಾಡಿ ಪ್ರತಿಭಟನೆ
ಪಾಲಿಕೆಯ ಗೇಟ್ ಬಂದ್ ಮಾಡಿ ನೌಕರರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಕೆಲಸಗಳು ಸ್ಥಗಿತಗೊಂಡಿದ್ದವು. ಎಲ್ಲ ವಿಭಾಗಗಳ ಬಾಗಿಲು ಬಂದ್ ಮಾಡಲಾಗಿತ್ತು. ಪಾಲಿಕೆ ಆವರಣದೊಳಗೆ ಬೆರಳೆಣಿಕೆಯಷ್ಟು ಜನರ ಮಾತ್ರ ಇದ್ದರು. ಇನ್ನು, ವಿವಿಧ ಕೆಲಸಗಳಿಗೆ ಪಾಲಿಕೆ ಆಗಮಿಸಿದ್ದ ಜನರು, ಪ್ರತಿಭಟನೆ ಹಿನ್ನೆಲೆ ಬರಿಗೈಲಿ ಹೊರ ನಡೆಯುವಂತಾಯಿತು.ಪಾಲಿಕೆ ಸಂಪೂರ್ಣ ಸ್ಥಬ್ಧ
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿ.ವೈ.ವಿಜಯೇಂದ್ರ, ಸುದ್ದಿಗೋಷ್ಠಿಯಲ್ಲಿ 3 ಪ್ರಮುಖ ಪಾಯಿಂಟ್ ಪ್ರಸ್ತಾಪ, ಏನೇನದು?