ಮೊಟ್ಟೆ ಸತೀಶ್‌ ಮೇಲೆ ದಾಳಿ ಆರೋಪ, ಆಸ್ಪತ್ರೆಗೆ ದಾಖಲು – 3 ಫಟಾಫಟ್‌ ನ್ಯೂಸ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

FATAFAT NEWS SHIMOGA, 16 AUGUST 2024

ಬೈಕ್‌ ಸ್ಕಿಡ್‌, ಕಾಲಿನ ಮೂಳೆ ಮುರಿತ

EBEDEF FATAFAT-1-NEW.webpಶಿವಮೊಗ್ಗ ಲೈವ್.ಕಾಂ : ಬೈಕ್‌ ಸ್ಕಿಡ್‌ ಆಗಿ ಬಿದ್ದು ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಕುಂಸಿ ಸಮೀಪದ ತ್ಯಾಜ್ಯವಳ್ಳಿ ಮತ್ತು ದೇವಬಾಳು ಮಧ್ಯೆ ಘಟನೆ ಸಂಭವಿಸಿದೆ. ತ್ಯಾಜ್ಯವಳ್ಳಿಯ ಶಂಕರಪ್ಪ ಎಂಬುವವರು ಚಲಾಯಿಸುತ್ತಿದ್ದ ಬೈಕ್‌ ಅಪಘಾತಕ್ಕೀಡಾಗಿದೆ. ಹಿಂಬದಿ ಸವಾರ ಗಿರೀಶ್‌ ಎಂಬುವವರು ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕಾಲಿನ ಮೂಳೆ ಮುರಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಸಂಭ್ರಮ, ಜಿಲ್ಲೆಯಾದ್ಯಂತ ಯಾರೆಲ್ಲ ಧ್ವಜಾರೋಹಣ ಮಾಡಿದರು? ಇಲ್ಲಿದೆ ಡಿಟೇಲ್ಸ್‌

ಬೈಕ್‌ನಲ್ಲಿ ಬಂದು ದುಷ್ಕರ್ಮಿಗಳಿಂದ ಸರ ಕಳ್ಳತನ

EBEDEF FATAFAT-2-NEW.webpಶಿವಮೊಗ್ಗ ಲೈವ್.ಕಾಂ : ನಗರದ ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶದ ಬಳಿ ಕಾರ್ಮಿಕ ಮಹಿಳೆಯೊಬ್ಬರ 20 ಗ್ರಾಂ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಂಗಳವಾರ ಅಪಹರಿಸಿದ್ದಾರೆ. ಕಲ್ಲೂರು ಮಂಡ್ಲಿಯೊಂದರ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ 53 ವರ್ಷದ ಮಹಿಳೆಯ ಸರ ಕಿತ್ತುಕೊಂಡಿದ್ದಾರೆ. ಮಹಿಳೆ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಶೂ ಹೊಲಿಸಿಕೊಂಡು ಕಾರು ಬಳಿ ಬಂದ ಸರ್ಕಾರಿ ನೌಕರನಿಗೆ ಕಾದಿತ್ತು ಆಘಾತ

ಮಾಜಿ ಕಾರ್ಪೊರೇಟರ್‌ ಮೇಲೆ ಹಲ್ಲೆ

160824 Attack alligation against motte satish in Shimoga

EBEDEF FATAFAT-3-NEW.webpಶಿವಮೊಗ್ಗ ಲೈವ್.ಕಾಂ : ಮಾಜಿ ಕಾರ್ಪೊರೇಟರ್‌ ಸತ್ಯನಾರಾಯಣ ರಾಜು (ಮೊಟ್ಟೆ ಸತೀಶ) ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಕುಸ್ಕೂರಿನಲ್ಲಿ ಜಮೀನು ವಿವಾದ ಸಂಬಂಧ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ವಾಟ್ಸಪ್‌ ಮೂಲಕ ಸ್ಪಷ್ಟನೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಪ್ರಕರಣದಲ್ಲಿ ಯಾರಿಗು ಗಾಯವಾಗಿಲ್ಲ. ರೌಡಿ ಚಟುವಟಿಕೆಯು ಇಲ್ಲ. ಇದು ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ ⇒ ಗುಡ್‌ ಮಾರ್ನಿಂಗ್‌ ಶಿವಮೊಗ್ಗ | ಎಲ್ಲೆಲ್ಲಿ ಏನೇನಾಯ್ತು? ಜಿಲ್ಲೆಯ ಕಂಪ್ಲೀಟ್‌ ಸುದ್ದಿ ಒಂದೇ ಕ್ಲಿಕ್‌ನಲ್ಲಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment