ಕ್ರಿಕೆಟ್ ವಿಚಾರವಾಗಿ ಕಿರಿಕ್, ಬಡಿಗೆಯಿಂದ ಯುವಕನ ಮೇಲೆ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 ಮಾರ್ಚ್ 2022

ಕ್ರಿಕೆಟ್ ವಿಚಾರವಾಗಿ ಯುವಕರ ಮಧ್ಯೆ ಗಲಾಟೆಯಾಗಿದ್ದು, ಒಬ್ಬನ ಮೇಲೆ ದಾಳಿ ನಡೆಸಲಾಗಿದೆ. ಗಾಯಗೊಂಡಿದ್ದ ಯುವಕ ಚೇತರಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಶಿಕಾರಿಪುರದ ಕೋಡಿಹಳ್ಳಿಯ ಹೆಚ್.ಬಿ.ರಜನಿಕಾಂತ (34) ಗಾಯಗೊಂಡಿರುವ ಯುವಕ. ಅರುಣ್ ಕುಮಾರ್ ಮತ್ತು ರಾಕೇಶ ಹಲ್ಲೆ ನಡೆಸಿದವರು.

ಕೋಡಿಹಳ್ಳಿಯ ರವಿ ಎಂಬುವವರನ್ನು ಬೆಂಗಳೂರಿನ ಬಸ್ಸು ಹತ್ತಿಸಲು ಶಿರಾಳಕೊಪ್ಪಕ್ಕೆ ಬಂದಿದ್ದರು. ರಾತ್ರಿ ಬಸ್ಸು ಹತ್ತಿಸಿ ಹಿಂತಿರುಗುವಾಗ ರಜನಿಕಾಂತನನ್ನು ಅರುಣ್ ಮತ್ತು ರಾಕೇಶ್ ಸಮೀಪದ ಡಾಬಾಗೆ ಊಟಕ್ಕೆ ಕರೆದೊಯ್ದಿದ್ದಾರೆ.

ಡಾಬಾ ಸಮೀಪ ಕ್ರಿಕೆಟ್ ವಿಚಾರವಾಗಿ ಮಾತುಕತೆ ನಡೆಸಿ, ಹೊಡೆದಾಡಿಕೊಂಡಿದ್ದಾರೆ. ಬಡಿಗೆಯಿಂದ ರಜನಿಕಾಂತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 29, 2022

Leave a Comment