ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 31 ಆಗಸ್ಟ್ 2020
ಹತ್ಯೆಕೋರರಿಂದ ತಪ್ಪಿಸಿಕೊಂಡು ಬಂದು ಗಾಯಗೊಂಡಿದ್ದ ಹಸುವಿಗೆ ಭಜರಂಗದಳ ಕಾರ್ಯಕರ್ತರು ಚಿಕಿತ್ಸೆ ನೀಡಿ, ರಕ್ಷಣೆ ಮಾಡಿದ್ದಾರೆ. ಭದ್ರಾವತಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಪ್ರಕರಣ?
ಜೀವಂತ ಹಸುವಿನ ಚರ್ಮ ಸುಲಿಯಲು ಕಟುಕರು ಪ್ರಯತ್ನಿಸಿದ್ದಾರೆ. ಅದರ ಕಾಲಿನ ಭಾಗದಲ್ಲಿ ಚರ್ಮ ಸುಲಿಯಲಾಗಿದೆ. ಬೊಮ್ಮನಕಟ್ಟೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಟುಕರಿಂದ ತಪ್ಪಿಸಿಕೊಂಡ ಹಸು ಹುಡ್ಕೊ ಕಾಲೋನಿವರೆಗೂ ಬಂದಿದ್ದು, ಸುಸ್ತಾಗಿ ಕೂಳಿತಿತ್ತು. ಇದನ್ನು ಗಮನಿಸಿದ ಭಜರಂಗದಳ ಕಾರ್ಯಕರ್ತರು, ಚಿಕಿತ್ಸೆ ಕೊಡಿಸಿದ್ದಾರೆ.
ಹಸುವನ್ನು ರಕ್ಷಿಸಲಾಗಿದೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಭಜರಂಗದಳ ವತಿಯಿಂದ ದೂರು ನೀಡಲಾಗಿದೆ. ಕಟುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]