ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಅಕ್ಟೋಬರ್ 2020
ಶಾರೂಖ್ ಖಾನ್ ಹತ್ಯೆ ಪ್ರಕರಣದ ಆರೋಪಿಗಳನ್ನು ಭದ್ರಾವತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರು ಮಂದಿಯನ್ನು ಬಂಧಿಸಲಾಗಿದೆ.
ಹತ್ಯೆ ಆಗಿದ್ದು ಹೇಗೆ?
ಭದ್ರಾವತಿಯ ಹನುಮಂತನಗರದ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ರೌಡಿ ಶೀಟರ್ ಶಾರೂಖ್ ಖಾನ್ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಶಾರೂಖ್ ತಂದೆ ಮಹಮ್ಮದ್ ಅಖ್ತರ್ ಅ.1ರಂದು ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಹತ್ಯೆಗೆ ಕಾರಣವೇನು?
ಹಳೆ ದ್ವೇಷ, ಹಣಕಾಸು ಸಮಸ್ಯೆಯ ಕಾರಣಕ್ಕೆ ಶಾರೂಖ್ ಖಾನ್ ಜೊತೆಗೆ ಹಿಂದೊಮ್ಮೆ ಜಗಳವಾಗಿತ್ತು ಎನ್ನಲಾಗಿದೆ. ಈ ಆನುಮಾನದಲ್ಲಿ ಪೊಲೀಸರು ಆರೋಪಿಯೊಬ್ಬನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಕೊಲೆ ರಹಸ್ಯೆ ಹೊರಬಿದ್ದಿದೆ.
ಯಾರನ್ನೆಲ್ಲ ಬಂಧಿಸಲಾಗಿದೆ?
ಹನುಮಂತನಗರದ ರಮೇಶ (44), ವೆಂಕಟರಾಮ (35), ಸತ್ಯಸಾಯಿನಗರದ ಕಾರ್ತಿಕ್ (24), ಚಂದ್ರ (37), ಮಧುಸೂದನ್ ಅಲಿಯಾಸ್ ಗುಂಡ (28), ರಮೇಶ್ ಎಂಬಾತನನ್ನು ಬಂಧಿಸಲಾಗಿದೆ.
ಭದ್ರಾವತಿ ನಗರ ಸರ್ಕಲ್ ಇನ್ಸ್‍ಪೆಕ್ಟರ್ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಹೊಸಮನೆ ಠಾಣೆ ಪಿಎಸ್ಐ ಜಯಪ್ಪ, ಸಿಬ್ಬಂದಿಗಳಾದ ವೆಂಕಟೇಶ್ ಕುಮಾರ್, ಮಂಜುನಾಥ್, ಮಖ್ಸೂದ್ ಖಾನ್, ಸಂತೋಷ್ ಕುಮಾರ್, ಅಂಬರೀಶ್, ವಿಶಾಲಾಕ್ಷಿ, ವಿಜಯಕಲಾ, ನವೀನ್ ಪವಾರ್, ಪ್ರಸನ್ನ ಸ್ವಾಮಿ, ಸುನೀಲ್ ಕುಮಾರ್, ಮಧುಸೂದನ್, ರವಿಕುಮಾರ್ ಕಾರ್ಯಾಚರಣೆಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422