ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಆಗಸ್ಟ್ 2021
ಬೈಕುಗಳ ಮುಖಾಮುಖಿ ಡಿಕ್ಕಿಯಾಗಿ ಖೋ ಖೋ ಆಟಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕುಗಳು ಡಿಕ್ಕಿಯಾಗಿ ಸವಾರರಿಬ್ಬರು ರಸ್ತೆಗೆ ಬೀಳುವ ಧಾರುಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಖ್ಯಾತ ಖೋ ಖೋ ಆಟಗಾರ ನವೀನ್ (29) ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ತೀವ್ರ ಗಾಯಗೊಂಡಿದ್ದ ನವೀನ್ ಸಾವನ್ನಪ್ಪಿದ್ದಾರೆ.
ಹೇಗಾಯ್ತು ಅಪಘಾತ?
ಶಿವಮೊಗ್ಗದ ಗೋಪಾಳದ ದ್ರೌಪದಮ್ಮ ಸರ್ಕಲ್’ನಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಎರಡು ಬೈಕುಗಳು ಅತಿ ವೇಗವಾಗಿ ಬಂದಿದ್ದರಿಂದ ಸವಾರರಿಗೆ ಕಂಟ್ರೋಲ್ ಸಿಗದೆ ಗುದ್ದಿಕೊಂಡಿವೆ. ಅಪಘಾತದ ರಭಸಕ್ಕೆ ಬೈಕುಗಳು ನುಜ್ಜುಗುಜ್ಜಾಗಿವೆ. ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಡುವೆ ಖೋ ಖೋ ಆಟಗಾರ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರಾಷ್ಟ್ರಮಟ್ಟದ ಆಟಗಾರ
ಅಶೋಕ ನಗರ ನಿವಾಸಿ ನವೀನ್ (29) ಶಿವಮೊಗ್ಗದ ಪ್ರಖ್ಯಾತ ಖೋ ಖೋ ಆಟಗಾರ. ಹಲವು ಭಾರಿ ರಾಷ್ಟ್ರಮಟ್ಟದಲ್ಲೂ ಖೋ ಖೋ ಆಡಿ ಹೆಸರು ಗಳಿಸಿದ್ದರು. ಖೋ ಖೋ ಪಂದ್ಯಾವಳಿಗಳಲ್ಲಿ ನವೀನ್ ಆಟ ರಾಜ್ಯಮಟ್ಟದ ಉಳಿದ ಆಟಗಾರರನ್ನು ಸೆಳೆದಿತ್ತು. ನವೀನ್’ಗೆ ಪತ್ನಿ,ಇಬ್ಬರು ಮಕ್ಕಳಿದ್ದಾರೆ.
ಮತ್ತೊಬ್ಬನಿಗೂ ಗಂಭೀರ ಗಾಯ
ನವೀನ್ ಬೈಕ್’ಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಬೈಕ್ ಸವಾರನಿಗೂ ಗಾಯವಾಗಿದೆ. ಆತನನ್ನು ನವೀನ್ (32) ಎಂದು ಗುರುತಿಸಲಾಗಿದೆ. ನವೀನ್ ಗಂಭೀರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200