ಶಿವಮೊಗ್ಗ ಸೇತುವೆ ಮೇಲೆ ಕಾರು ಡಿಕ್ಕಿಯಾಗಿ ತುಂಗಾ ನದಿಗೆ ಬಿದ್ದಿದ್ದ ಬೈಕ್ ಸವಾರ ಸಾವು

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 13 APRIL 2023

SHIMOGA : ಹಳೆ ಸೇತುವೆಯಿಂದ ತುಂಗಾ ನದಿಗೆ ಬಿದ್ದಿದ್ದ ಬೈಕ್ ಸವಾರ (Bike Rider) ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ಸವಾರನಿಗೆ ಚಿಕಿತ್ಸೆ ಮುಂದುವರೆದಿದೆ.

Youth-pushed-from-tunga-bridge-over-an-altercation

ಭದ್ರವಾವತಿಯ ದಿವ್ಯರಾಜ್ (36) ಮೃತಪಟ್ಟಿದ್ದಾರೆ. ಸಹ ಸವಾರ ಸಂತೋಷ್ (26) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಗಾಯ್ತು ಅಪಘಾತ?

ತುಂಗಾ ನದಿ ಹಳೆ ಸೇತುವೆ ಮೇಲೆ ಓಮ್ನಿ ಕಾರು ಬೈಕಿಗೆ ಡಿಕ್ಕಿಯಾಗಿ ದಿವ್ಯರಾಜ್ (Bike Rider) ಅವರು ಹೊಳೆಗೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ರಕ್ಷಣೆ ಮಾಡಿ, ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದಿವ್ಯರಾಜ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ದಿವ್ಯರಾಜ್ ಅವರು ಕಟ್ಟಡಗಳ ವೆಲ್ಡಿಂಗ್ ಗುತ್ತಿಗೆದಾರರಾಗಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಅಡ್ಡಗಟ್ಟಿ ಕತ್ತು ಹಿಸುಕಲು ಯತ್ನ

ಘಟನೆಯಲ್ಲಿ ಗಾಯಗೊಂಡಿರುವ ಸಂತೋಷ್ ಅವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY, CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 13, 2023

Leave a Comment