ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಲಾಡ್ಜ್ ಒಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಬೈಕ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿ ಸಂಭವಿಸಿದೆ.
ಮಂಜುನಾಥ ಎಂಬುವವರಿಗೆ ಸೇರಿದ ಸುಜುಕಿ ಮ್ಯಾಕ್ಸ್ ಬೈಕ್ ಕಳ್ಳತನವಾಗಿದೆ. ಜನವರಿ 26ರಂದು ಮಂಜುನಾಥ ಅವರು ಬಿ.ಹೆಚ್.ರಸ್ತೆಯ ದುರ್ಗಾ ಲಾಡ್ಜ್ ಬಳಿ ಬೈಕ್ ನಿಲ್ಲಿಸಿ, ತೆರಳಿದ್ದರು. ಲಾಡ್ಜ್ ಮಾಲೀಕರನ್ನು ಮಾತನಾಡಿಸಿ ಹೊರಗೆ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು.
ಎಲ್ಲೆಡೆ ಹುಡುಕಾಡಿದ ಮಂಜುನಾಥ ಅವರು ಬಳಿಕ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shimoga Police | About Shivamogga Live
ಇದನ್ನೂ ಓದಿ:➤ ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು? ಇಲ್ಲಿದೆ ಪಾಯಿಂಟ್ಸ್