ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SHIMOGA | 20 ಜುಲೈ 2022
ಮೊಬೈಲ್ ಶೋ ರೂಂ ಒಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (BIKE THEFT). ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ (BH ROAD) ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿಯ ಪ್ರದೀಪ್ ಕುಮಾರ್ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ (HONDA ACTIVA) ಕಳ್ಳತನವಾಗಿದೆ. ಬಸ್ ನಿಲ್ದಾಣ ಸಮೀಪ ಬಿ.ಹೆಚ್.ರಸ್ತೆಯಲ್ಲಿರುವ ಮೊಬೈಲ್ ಶೋ ರೂಂ ಒಂದರ ಬಳಿ ಪ್ರದೀಪ್ ಕುಮಾರ್ ಅವರು ರಾತ್ರಿ 8 ಗಂಟೆಗೆ ಹೊತ್ತಿಗೆ ಬೈಕ್ ನಿಲ್ಲಿಸಿ ತೆರಳಿದ್ದರು. ಅರ್ಧ ಗಂಟೆ ನಂತರ ಬೈಕ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದಾಗ ಬೈಕ್ (BIKE) ನಾಪತ್ತೆಯಾಗಿತ್ತು.
ಎಲ್ಲೆಡೆ ಹುಡುಕಾಡಿದ ಪ್ರದೀಪ್ ಕುಮಾರ್ ಅವರು ಬಳಿಕ ದೊಡ್ಡಪೇಟೆ ಪೊಲೀಸ್ (DODDAPETE POLICE) ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.