ಮಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ಸಲ್ಲಿ ಬಂದಿಳಿದ ವ್ಯಕ್ತಿಗೆ ಕಾದಿತ್ತು ಶಾಕ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIMOGA NEWS, 26 SEPTEMBER 2024 : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ (Bike) ಕಳ್ಳತನವಾಗಿದೆ. ಇನ್ನೊಂದೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ.
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

» ಮಂಗಳೂರಿನಿಂದ ಹಿಂತಿರುಗಿದಾಗ ಶಾಕ್‌

ಕೃಷಿ ನಗರದ ನಿವಾಸಿ ಸತೀಶ್‌ ಕುಮಾರ್‌ ಎಂಬುವವರು ತಮ್ಮ ಪಲ್ಸರ್‌ ಬೈಕ್‌ ಅನ್ನು ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದರು. ಮಂಗಳೂರಿಗೆ ಹೋಗಿ ಹಿಂತಿರುಗಿದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಲಾಗಿದೆ. ಎಲ್ಲೆಡೆ ಹುಡುಕಿದರೂ ಬೈಕ್‌ ಸಿಗಲಿಲ್ಲ. ಈ ಹಿನ್ನೆಲೆ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

» ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಕಳವು

ಮಾರ್ನಮಿ ಬೈಲ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಅನ್ನು ಹಾಡಹಗಲೆ ಕಳವು ಮಾಡಲಾಗಿದೆ. ಇಲ್ಲಿನ ಅಶ್ವಾಕ್‌ ಅಹಮದ್‌ ಅವರು ತಮ್ಮ ಜಮೀನಿಗೆ ಹೋಗಿ ಬೆಳಗ್ಗೆ 10 ಗಂಟೆ ಹೊತ್ತಿಗೆ ಮನೆಗೆ ಮರಳಿದ್ದರು. ಮನೆ ಮುಂದೆ ಹೋಂಡಾ ಆಕ್ಟೀವಾ ಬೈಕ್‌ ನಿಲ್ಲಿಸಿ ಒಳಗೆ ಹೋಗಿದ್ದರು. ಅರ್ಧ ಗಂಟೆ ಬಳಿಕ ಗಮನಿಸಿದಾಗ ಹೋಂಡಾ ಆಕ್ಟೀವಾ ಮನೆ ಮುಂದೆ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ » ರಾತ್ರೋರಾತ್ರಿ ನೂರಾರು ಅಡಿಕೆ ಮರಗಳಿಗೆ ಗರಗಸ ಹಾಕಿದ ದುಷ್ಕರ್ಮಿಗಳು

Leave a Comment