ಉದ್ಯಮಿಗಳೇ ಹುಷಾರ್‌, ಶಿವಮೊಗ್ಗ ಜಿಲ್ಲೆಯ ಡಾಂಬಾರು ವ್ಯಾಪಾರಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಡಾಂಬರ್ ವ್ಯಾಪಾರಿಯೊಬ್ಬರಿಗೆ (bitumen trader) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI) ನೋಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ₹31,06,300 ವಂಚಿಸಲಾಗಿದೆ.

ಹೇಗಾಯ್ತು ವಂಚನೆ?

ಶಿವಮೊಗ್ಗ ಜಿಲ್ಲೆಯ ಡಾಂಬಾರ್‌ ವ್ಯಾಪಾರಿಯೊಬ್ಬರು (ಹೆಸರು ಗೌಪ್ಯ) ತಮ್ಮ ವ್ಯಾಪಾರಕ್ಕಾಗಿ ಜಸ್ಟ್ ಡಯಲ್‌ನಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿದ್ದರು. ಇದನ್ನು ಬಳಸಿಕೊಂಡ ಅಪರಿಚಿತರು, ತಾವು ರಾಕ್ಯಾಲಿಡ್ ಎಂಬ ಕಂಪನಿಯ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಕರೆ ಮಾಡಿದ್ದರು.

SMS-Fraud-Shimoga-CEN-Police-Station.

ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಡಾಂಬರ್ ಸರಬರಾಜು ಮಾಡಲು ನೋಂದಣಿ ಅಗತ್ಯವಿದೆ ಎಂದು ನಂಬಿಸಿದ್ದರು. ಇದಕ್ಕಾಗಿ ವಿವಿಧ ಹಂತಗಳಲ್ಲಿ ನೋಂದಣಿ ಶುಲ್ಕ ಮತ್ತು ಇತರೆ ವೆಚ್ಚಗಳ ಹೆಸರಿನಲ್ಲಿ ವ್ಯಾಪಾರಿಯಿಂದ ಹಣ ವರ್ಗಾಯಿಸಿಕೊಂಡಿದ್ದರು. ಹಣ ಪಾವತಿಸಿದರೂ ನೋಂದಣಿ ಪ್ರಕ್ರಿಯೆ ನಡೆಯದಿದ್ದಾಗ ಮತ್ತು ಪುನಃ ಹಣಕ್ಕೆ ಬೇಡಿಕೆ ಇಟ್ಟಾಗ ವ್ಯಾಪಾರಿಗೆ ತಾವು ಮೋಸ ಹೋಗಿರುವುದು ಅರಿವಾಗಿದೆ.

ಇದನ್ನೂ ಓದಿ » ‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?

ಘಟನೆ ಸಂಬಂಧ ಶಿವಮೊಗ್ಗ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment