SHIVAMOGGA LIVE NEWS | 13 JULY 2024
SHIMOGA : ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮನೆಯೊಂದರ ಮುಂದೆ ನಿಂಬೆಹಣ್ಣು ಮತ್ತು ಬೆಲ್ಲ ಎಸೆದು ಹೋಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಟ ಮಂತ್ರ (Black Magic) ಶಂಕೆ ವ್ಯಕ್ತಪಡಿಸಿರುವ ಮನೆ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂರನೆ ಪ್ಯಾರಾ ಈ ಜಾಹೀರಾತಿನ ಕೆಳಗಿದೆ

ನಗರದ ಕಾಶಿಪುರದ ಹನುಮಂತಪ್ಪ ಬಡವಾಣೆಯ 2ನೇ ಅಡ್ಡರಸ್ತೆಯಲ್ಲಿರುವ ಶಿವಲಿಂಗೇಗೌಡ ಎಂಬುವವರ ಮನೆ ಮುಂದೆ ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬಂದ ಓರ್ವ ಪುರುಷ ಮತ್ತು ಮಹಿಳೆ ನಿಂಬೆಹಣ್ಣು ಮತ್ತು ಬೆಲ್ಲ ಎಸೆದು ಹೋಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಪುರುಷ ಮುಖ ಕಾಣದ ಹಾಗೆ ಪೂರ್ತಿ ಹೆಲ್ಮೆಟ್ ಧರಿಸಿದ್ದಾನೆ. ಮಹಿಳೆಯು ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದಾಳೆ.
ಬೈಕ್ ಚಲಿಸುತ್ತಿರುವಾಗಲೆ ನಿಂಬೆಹಣ್ಣು ಮತ್ತು ಬೆಲ್ಲವನ್ನು ಶಿವಲಿಂಗೇಗೌಡ ಅವರ ಮನೆ ಮುಂದೆ ಎಸೆದಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲ್ಯಾಂಡ್ ಆಗದ ಇಂಡಿಗೋ ವಿಮಾನ, ಹೋಮ್ ಮಿನಿಸ್ಟರ್ ಬೆಂಗಳೂರಿಗೆ ವಾಪಸ್





