ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | RIPPONPETE NEWS | 2 ಜುಲೈ 2021
ಪೋಷಕರ ಎದುರಲ್ಲೆ ಮಗ ಹೊಳೆ ಪಾಲಾದ ಕರುಣಾಜನಕ ಘಟನೆ ರಿಪ್ಪನ್‍ಪೇಟೆ ಸಮೀಪ ವರದಿಯಾಗಿದೆ. ಹೊಸನಗರ ತಾಲೂಕು ಮುತ್ತಲ ಹೊಳೆಯಲ್ಲಿ ಘಟನೆ ಸಂಭವಿಸಿದೆ.
ಸಿದ್ದೇಶ್ ಅಲಿಯಾಸ್ ಸಚಿನ್ (14) ನೀರಿನಲ್ಲಿ ಮುಳುಗಿದ ಬಾಲಕ. ತಂದೆ, ತಾಯಿ, ಸಹೋದರನ ಕಣ್ಣೆದುರಲ್ಲೇ ಈತ ನೀರಿನಲ್ಲಿ ಮುಳುಗಿದ್ದಾನೆ.
ಬಟ್ಟೆ ಒಗೆಯಲು ಹೋಗಿದ್ದರು
ಜಾಗದ್ದೆಯ ಶೇಷಗಿರಿ, ಮಧುಮತಿ ಅವರು ಇಬ್ಬರು ಮಕ್ಕಳನ್ನು ಕರೆದುಕೊಂಡು ಮುತ್ತಲ ಹೊಳೆಯಲ್ಲಿ ಬಟ್ಟೆ ಒಗೆಯಲು ತೆರಳಿದ್ದರು. ಈ ಸಂದರ್ಭ ಸಂಜಯ್ ಮತ್ತು ಸಚಿನ್ ಇಬ್ಬರು ಮುತ್ತಲ ಹೊಳೆಯಲ್ಲಿ ಈಜುತ್ತಿದ್ದರು. ಈ ವೇಳೆ ಕಾಲು ಜಾರಿ ಹೊಳೆಯ ಮಧ್ಯ ಭಾಗಕ್ಕೆ ಹೋದ ಸಚಿನ್, ಅಲ್ಲೆ ಮುಳುಗಿದ್ದಾನೆ.
ಪೋಷಕರು, ಸಹೋದರ ಎದುರಲ್ಲೆ ಸಚಿನ್ ನೀರಿನಲ್ಲಿ ಮುಳುಗಿದರು, ರಕ್ಷಣೆ ಮಾಡಲಾಗಲಿಲ್ಲ. ಘಟನೆ ಸಂಬಂಧ ರಿಪ್ಪನ್‍ಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






