ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಖಾಸಗಿ ಬಸ್ ಸಮಯದ ವಿಚಾರವಾಗಿ ಶಿವಮೊಗ್ಗದ ರವೀಂದ್ರ ನಗರದಲ್ಲಿ ಗಲಾಟೆ ನಡೆದಿದೆ. ಬಸ್ ಮಾಲೀಕರೊಬ್ಬರ (bus owner) ಮೇಲೆ ಮತ್ತೊಂದು ಸಂಸ್ಥೆಯ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ದೊಣ್ಣೆ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ.
ಕೃಷ್ಣ ಮೋಟಾರ್ ಸರ್ವಿಸ್ ಬಸ್‌ನ ಮಾಲೀಕ ವಿಜಯಕುಮಾರ್ ಎಂಬುವವರು ತಮ್ಮ ಬಸ್ಸುಗಳ ಸಮಯದ ವಿಚಾರವಾಗಿ ಶಿವಮೊಗ್ಗದ ಉಷಾ ಸರ್ಕಲ್ ಸಮೀಪದ ರವೀಂದ್ರ ನಗರ ಬಸ್ ನಿಲ್ದಾಣದ ಬಳಿ ವಿಚಾರಿಸಲು ತೆರಳಿದ್ದರು. ಆಗ ಮತ್ತೊಂದು ಬಸ್ಸು ನಿಗದಿತ ಸಮಯವನ್ನು ಮೀರಿ ನಿಲ್ದಾಣದಿಂದ ತಡವಾಗಿ ಹೊರಡುತ್ತಿರುವುದನ್ನು ಗಮನಿಸಿದ್ದರು. ಈ ಸಂಬಂಧ ಬಸ್ಸಿನ ಕಂಡಕ್ಟರ್‌ಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ » ಭದ್ರಾ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ
ಆಗ ಕಂಡಕ್ಟರ್, ಡ್ರೈವರ್ ಮತ್ತು ಅವರ ಜೊತೆಯಲ್ಲಿದ್ದ ಮೂರ್ನಾಲ್ಕು ಮಂದಿ ವಿಜಯಕುಮಾರ್ ಅವರಿಗೆ ಅವಾಚ್ಯವಾಗಿ ಬೈದು, ದೊಣ್ಣೆ ಹಾಗೂ ರಾಡ್‌ಗಳಿಂದ ತಲೆ ಮತ್ತು ಸೊಂಟಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ವಿಜಯ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಅಂಗನವಾಡಿ ಸಹಾಯಕಿ ಅನುಮಾನಾಸ್ಪದ ಸಾವು ಕೇಸ್, ಆರೋಪಿ ಅರೆಸ್ಟ್

- ಮನೆ, ಅಡಿಕೆ ಮರಳಗಳ ಸುತ್ತಲು ಟ್ರಂಚ್ ನಿರ್ಮಿಸುತ್ತಿದ್ದ ಅರಣ್ಯ ಇಲಾಖೆಗೆ MLA ವಾರ್ನಿಂಗ್

- ಮೈಸೂರು – ತಾಳಗುಪ್ಪ ರೈಲುಗಳ ಕುರಿತು ಮಹತ್ವದ ಅಪ್ಡೇಟ್

- ಚಂದ್ರಗುತ್ತಿ ಜಾತ್ರೆ, ಮಹತ್ವದ ಆದೇಶ ಹೊರಡಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ, ಏನದು?

- ಉಚಿತ ಆಯುರ್ವೇದ ಚಿಕಿತ್ಸೆ ನೆಪ, ಶಿವಮೊಗ್ಗದ ಮತ್ತೂರಿನಲ್ಲಿ ಮಹಾ ವಂಚನೆ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





