ಶಿವಮೊಗ್ಗದಲ್ಲಿ ಚೇಸ್‌ ಮಾಡಿ ಕಾರು ಅಡ್ಡಗಟ್ಟಿದ ಮಹಿಳೆಯರು, ಗ್ಲಾಸ್‌ ಪೀಸ್‌ ಪೀಸ್‌

ಶಿವಮೊಗ್ಗ: ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು (car driver) ಮೂವರು ಮಹಿಳೆಯರು ಅಡ್ಡಗಟ್ಟಿದ್ದು, ಯುವಕರ ಗುಂಪು ಹಲ್ಲೆ ನಡೆಸಿದೆ. ವೇಣುಗೋಪಾಲ್.ಹೆಚ್.ಎನ್ ಎಂಬುವವರು ಹಲ್ಲೆಗೊಳಗಾಗಿದ್ದಾರೆ.

ಚೇಸ್‌ ಮಾಡಿ ಅಡ್ಡಗಟ್ಟಿದ ಮಹಿಳೆಯರು

ವೇಣುಗೋಪಾಲ್ ಅವರು ತಮ್ಮ ಕಾರಿನಲ್ಲಿ ಮೆಡಿಕಲ್ ಶಾಪ್‌ಗೆ ತೆರಳುತ್ತಿದ್ದರು. ಇಲಿಯಾಜ್ ನಗರದ ಆಯೂಬ್ ಕ್ಯಾಂಟೀನ್ ಸರ್ಕಲ್ ಬಳಿ ಸ್ಕೂಟಿಯಲ್ಲಿ ಬಂದ ಮೂವರು ಮಹಿಳೆಯರು ಕಾರನ್ನು ಅಡ್ಡಗಟ್ಟಿದ್ದಾರೆ. ‘ಕಾರು ವೇಗವಾಗಿ ಓಡಿಸುತ್ತೀಯಾ. ನಮ್ಮ ಸ್ಕೂಟಿಗೆ ಟಚ್ ಮಾಡಿದ್ದೀಯ’ ಎಂದು ಗಲಾಟೆ ಆರಂಭಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  

Doddapete police station in shimoga

Doddapete police station in shimoga

ಯುವಕರ ತಂಡದಿಂದ ಹಲ್ಲೆ

ಈ ವೇಳೆ ಸ್ಥಳಕ್ಕೆ ಬಂದ 5 ರಿಂದ 10 ಯುವಕರು ವೇಣುಗೋಪಾಲ್ ಅವರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಆಯುಧದಿಂದ ವೇಣುಗೋಪಾಲ್ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ. ಅಲ್ಲದೆ ಕಲ್ಲಿನಿಂದ ಹೊಡೆದು ಕಾರಿನ ಮುಂಭಾಗದ ಗಾಜು ಮತ್ತು ಸೈಡ್ ಮಿರರ್ ಹಾನಿಗೊಳಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  

ಇದನ್ನೂ ಓದಿ : ಶಿವಮೊಗ್ಗ – ಬೆಂಗಳೂರು ವಿಮಾನ ಸೇವೆ ಸ್ಥಗಿತ, ಯಾಕೆ? ಇಲ್ಲಿದೆ ಪ್ರಮುಖ ಪಾಯಿಂಟ್ಸ್‌

ಘಟನೆಯಿಂದ ₹25,000 ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment