SHIVAMOGGA LIVE NEWS, 30 JANUARY 2024
ಶಿವಮೊಗ್ಗ : ಬಿ.ಹೆಚ್.ರಸ್ತೆಯಲ್ಲಿ ಕಾರಿನ ಹಿಂಬದಿ ಗಾಜು (GLASS) ಒಡೆದು ಬ್ಯಾಗ್ ಕಳ್ಳತನ ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ರೋಹಿತ್ ಎಂಬುವವರು ಕಾರು ನಿಲ್ಲಿಸಿ ತರಕಾರಿ ಖರೀದಿಸಿ ಬರುವಷ್ಟರಲ್ಲಿ ಘಟನೆ ನಡೆದಿದೆ.
ಕರ್ನಾಟಕ ಸಂಘದ ಮುಂಭಾಗ ರೋಹಿತ್ ಅವರು ತಮ್ಮ ಐ20 ಕಾರನ್ನು ಪಾರ್ಕಿಂಗ್ ಮಾಡಿದ್ದರು. ತರಕಾರಿ ಖರೀದಿಸಿ ಕಾರಿನ ಬಳಿ ಬಂದಾಗ ಬಲಭಾಗದ ಹಿಂಬದಿ ಗಾಜು ಒಡೆದಿರುವುದು ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಹಿಂಬದಿ ಸೀಟಿನ ಮೇಲಿಟ್ಟಿದ್ದ ಲ್ಯಾಪ್ಟಾಪ್ ಬ್ಯಾಗ್ ನಾಪತ್ತೆಯಾಗಿತ್ತು.
ಲ್ಯಾಪ್ಟಾಪ್ ಬ್ಯಾಗ್ನಲ್ಲಿ ಹೆಚ್.ಪಿ.ಕಂಪನಿಯ ಲ್ಯಾಪ್ಟಾಪ್, ಇಯರ್ ಪಾಡ್, ಬ್ಲೂಟೂತ್ ಡಿವೈಸ್, ಐ20 ಕಾರಿನ ಮೂಲ ಆರ್.ಸಿ.ಕಾರ್ಡ್ ಇತ್ತು ಎಂದು ರೋಹತ್ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಕುವೆಂಪು ವಿವಿ ಮುಚ್ಚಲು ನಡೀತಿದ್ಯ ಹುನ್ನಾರ? ಡಿ.ಎಸ್.ಅರುಣ್ ಆತಂಕ, ಕಾರಣಗಳೇನು?