ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಪೈಪ್ ರಾತ್ರೋರಾತ್ರಿ ನಾಪತ್ತೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2021

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆಯುವುದು, ಟೈರ್ ಬಿಚ್ಚಿಕೊಂಡು ಹೋಗುವುದು, ಕಾರಿನ ಒಳಗಿದ್ದ ವಸ್ತುಗಳನ್ನು ಕದ್ದೊಯ್ಯುವ ಪ್ರಕರಣಗಳನ್ನು ಕೇಳಿದ್ದೇವೆ. ಈಗ ಕಾರಿನ ಸೈಲೆನ್ಸರ್ ಪೈಪನ್ನು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಪೈಪನ್ನು ರಾತ್ರೋರಾತ್ರಿ ಕಳುವು ಮಾಡಲಾಗಿದೆ. ಶಿವಮೊಗ್ಗದ ಮಂಜುನಾಥ ಬಡಾವಣೆಯಲ್ಲಿ ಘಟನೆ ವರದಿಯಾಗಿದೆ.

ಹೇಗಾಯ್ತು ಘಟನೆ?

ಮಂಜುನಾಥ ಬಡಾವಣೆಯ ಸತೀಶ್ ಕುಮಾರ್ ಅವರು ಪಾತ್ರೆ ವ್ಯಾಪಾರ ಮಾಡುತ್ತಾರೆ. ಇದಕ್ಕಾಗಿ ಕಾರು ಖರೀದಿಸಿದ್ದರು. ಜುಲೈ 18ರಂದು ರಾತ್ರಿ ಕಾರು ತಂದು ಮನೆ ಮುಂದೆ ನಿಲ್ಲಿಸಿದ್ದರು. ಆ ಬಳಿಕ ನಗರದಲ್ಲಿ ಭಾರಿ ಮಳೆಯಾಗಿದ್ದರಿಂದ ಸ್ವಲ್ಪ ದಿನ ವ್ಯಾಪಾರ ನಿಲ್ಲಿಸಿದ್ದರು.

ಬಳಿಕ ವ್ಯಾಪಾರಕ್ಕೆ ಕಾರು ಹೊರಗೆ ತೆಗೆಯಲು ಹೋದಾಗ ಸೈಲೆನ್ಸರ್ ಪೈಪ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ರಾತ್ರೋರಾತ್ರಿ ಕಳ್ಳರು ಸದ್ದಿಲ್ಲದೆ ಸೈಲೆನ್ಸರ್ ಪೈಪ್ ಕಳುವು ಮಾಡಿರುವ ಶಂಕೆ ಇದೆ. ಇದರ ಮೌಲ್ಯ ಸುಮಾರು 74,500 ರೂ. ಎಂದು ಅಂದಾಜಿಸಲಾಗಿದೆ.

ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Shivamogga City 1

Leave a Comment