ಜಿಲ್ಲಾಧಿಕಾರಿಗಳ ಸಭಾಂಗಣದ ಶೌಚಾಲಯದ ಕಮೋಡ್’ಗಳು ಪೀಸ್ ಪೀಸ್, ಕೇಸ್ ದಾಖಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 7 ಫೆಬ್ರವರಿ 2022

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಶೌಚಾಲಯವನ್ನು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಕಮೋಡ್’ಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಸ್ಯಾನಿಟರಿ ಸಾಮಗ್ರಿಗಳನ್ನು ಹಾಳು ಮಾಡಿದ್ದಾರೆ.

Nanjappa Hospital Health Pack

ಉಪ ವಿಭಾಗಾಧಿಕಾರಿ ಕಚೇರಿ  ಬಿಲ್ಡಿಂಗ್’ನಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣವಿದೆ. ಇದಕ್ಕೆ ಹೊಂದಿಕೊಂಡಂತೆ ಶೌಚಾಲಯವಿದೆ.

ಬೀಗ ಮುರಿದು ಕೃತ್ಯ

ಶೌಚಾಲಯದ ಬಾಗಿಲಿಗೆ ಹಾಕಿದ್ದ ಬೀಗವನ್ನು ಕಿಡಿಗೇಡಿಗಳು ಮುರಿದಿದ್ದಾರೆ. ಒಳಗೆ ಇದ್ದ ನಾಲ್ಕು ಕಮೋಡ್’ಗಳನ್ನು ಒಡೆದು ಹಾಕಲಾಗಿದೆ. ಸ್ಯಾನಿಟರಿ ಸಾಮಗ್ರಿಗಳನ್ನು ಹಾಳು ಮಾಡಲಾಗಿದೆ. ತಹಶೀಲ್ದಾರ್ ಅವರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ತಿ ಹಾನಿಗೊಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಡಾ.ನಾಗರಾಜ್ ಅವರು ದೂರು ನೀಡಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

shimoga live news January reach

Shimoga District ProfileAbout Shivamogga Live | Whatsapp Number 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 7, 2022

Leave a Comment