ಶಿವಮೊಗ್ಗದಲ್ಲಿ ಕದ್ದು ಲಕ್ಕಿನಕೊಪ್ಪ ಬಳಿ ಮುಚ್ಚಿಡುತ್ತಿದ್ದಾಗ ಪೊಲೀಸರ ದಾಳಿ, ಮುಂದೇನಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 MAY 2024

SHIMOGA : ನೀರಿನ ಪೈಪ್‌ಲೈನ್‌ ಕೆಲಸಕ್ಕೆ ಬಳಸುತ್ತಿದ್ದ ಪೈಪ್‌ಗಳನ್ನು ಕಳವು ಮಾಡಿ ಲಕ್ಕಿನಕೊಪ್ಪದ ಜಮೀನು ಒಂದರ ಪಕ್ಕದ ಹಳ್ಳದಲ್ಲಿ ಮುಚ್ಚಿಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಪೈಪ್‌ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪವನ್‌, ಮಾಲತೇಶ, ರಮೇಶ, ವಸೀಂ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರು 1.50 ಲಕ್ಷ ರೂ. ಮೌಲ್ಯದ ನಾಲ್ಕು ಪೈಪ್‌ಗಳನ್ನು ಕಳವು ಮಾಡಿದ್ದರು. ಅದನ್ನು ಲಕ್ಕಿನಕೊಪ್ಪ ಸಮೀಪ ಮುಚ್ಚಿಡುತ್ತಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ದೊರೆತ್ತಿದ್ದು ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆ, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment