ತುಂಗಾ ನದಿ ದಂಡೆ ಮೇಲೆ ಮರಳು ಸಂಗ್ರಹ, ಸಾಲು ಸಾಲು ಕೇಸ್ ದಾಖಲು

SHIVAMOGGA LIVE NEWS | 22 FEBRURARY 2023

SHIMOGA : ತುಂಗಾ ನದಿ ದಂಡೆಯ ಮೇಲೆ ಅಕ್ರಮವಾಗಿ ಮರಳು (sand) ಸಂಗ್ರಹಿಸಿದ್ದ ಆರೋಪ ಸಂಬಂಧ ಸಾಲು ಸಾಲು ಪ್ರಕರಣ ದಾಖಲು ಮಾಡಲಾಗಿದೆ. ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

200123 Police Jeep With Light jpg

ಕೇಸ್ 1 : ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗಿತ್ತು. ಪರವಾನಗಿ ಇಲ್ಲಿದೆ ತುಂಗಾ ನದಿ ಬಲ ದಂಡೆಯ ಮೇಲೆ ಮರಳು ಸಂಗ್ರಹಿಸಿಲಾಗಿತ್ತು. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಪರಿಶೀಲನೆ ಬಳಿಕ ಇಲಾಖೆ ವತಿಯಿಂದ ಮರಳು ಸಂಗ್ರಹ ಮಾಡಿದವರ ವಿರುದ್ಧ ದೂರು ನೀಡಲಾಗಿದೆ.

ಕೇಸ್ 2 : ಹೊಳೆಹನಸವಾಡಿ ಗ್ರಾಮದ ಬಳಿ ತುಂಗಾ ನದಿಯ ದಂಡೆಯ ಮೇಲೆ ಅನಧಿಕೃತವಾಗಿ ಮರಳು  (sand) ಸಂಗ್ರಹ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಪರಿಶೀಲನೆ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.

[su_animate type=”bounceInUp”][su_button url=”https://chat.whatsapp.com/Gw9Vd0MvljO9kI4k7LDRmj” target=”blank” style=”glass” background=”#0003ab” color=”#ffffff” size=”6″ radius=”0″ icon=”https://shivamoggalive.com/wp-content/uploads/2022/11/Whatspp-Logo.png”]CLICK HERE TO JOIN SHIVAMOGGA LIVE WHATSAPP GROUP[/su_button][/su_animate]

ಕೇಸ್ 3 : ಸೂಗೂರು ಗ್ರಾಮದ ಸಮೀಪದಲ್ಲೂ ತುಂಗಾ ನದಿ ದಂಡೆ ಮೇಲೆ ಅಕ್ರಮವಾಗಿ ಮರಳು ತೆಗೆದು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

jnnce%20college%20shimoga

© ಶಿವಮೊಗ್ಗ ಲೈವ್‌ : February 22, 2023

Leave a Comment