ಗಾಂಧಿ ಬಜಾರ್‌ನಲ್ಲಿ ಹಾಡಹಗಲೆ ಮಹಿಳೆಗೆ ಮಂಕು ಕವಿಯುವಂತೆ ಮಾಡಿದ ಕಳ್ಳಿಯರು, ಮುಂದೇನಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 MAY 2024

SHIMOGA : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಹಿಂದಿನಿಂದ ಬಂದು ಬೆನ್ನು ತಟ್ಟಿ, ಕೈಗೆ ಏನೋ ಸವರಿ ಬಂಗಾರದ ಸರ ಕಳ್ಳತನ (Chain Theft) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಂಧಿ ಬಜಾರ್‌ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಘಟನೆ ಸಂಭವಿಸಿದ್ದು ಹೇಗೆ?

ಗೋಪಾಳದ ಶಾಂತಾ ಜವಾಹರ ಎಂಬುವವರು ಗಾಂಧಿ ಬಜಾರ್‌ನಲ್ಲಿ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಇಬ್ಬರು ಮಹಿಳೆಯರು ಬಂದು ಬೆನ್ನು ತಟ್ಟಿದ್ದಾರೆ. ಶಾಂತಾ ಅವರು ತಿರುಗುತ್ತಿದ್ದಂತೆ ಕೈಗೆ ಏನೋ ಸವರಿದ್ದಾರೆ ಎಂದು ಆರೋಪಿಸಲಾಗಿದೆ. ಶಾಂತಾ ಅವರಿಗೆ ಮಂಕು ಕವಿದಂತಾಗಿದ್ದು, ಆ ಮಹಿಳೆಯರು ಹೇಳಿದಂತೆ ತಮ್ಮ ಕೊರಳಲ್ಲಿದ್ದ ಬಂಗಾರದ ಸರ ಬಿಚ್ಚಿ ಕೊಟ್ಟಿದ್ದಾರೆ. ಎರಡು ದಿನವಾದರೂ ಮಂಕು ಕವಿದಂತಹ ಪರಿಸ್ಥಿತಿ ಇತ್ತು. ಆ ಬಳಿಕ ಚೇತರಿಸಿಕೊಂಡು ಕುಟುಂಬದವರಿಗೆ ವಿಚಾರ ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ಸೂಡಾಗೆ ಒಂದು ವಾರದ ಡೆಡ್‌ಲೈನ್‌, ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟದ ವಾರ್ನಿಂಗ್

10 ಗ್ರಾಂ ತೂಕದ 67 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ಶಾಂತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 28, 2024

Leave a Comment