ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಸರ್ಕಲ್ನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಅಪಘಾತದ ಸಿಸಿಟಿವಿ ದೃಶ್ಯ (CCTV footage) ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ಗೆ ಲಭ್ಯವಾಗಿದೆ. ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯ ಮತ್ತು ಸರ್ಕಲ್ನಲ್ಲಿ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ.
ಸಿಸಿಟಿವಿ ವಿಡಿಯೋದಲ್ಲಿ ಏನಿದೆ?
ಮಾರ್ಚ್ 19ರ ಮಧ್ಯಾಹ್ನ 12:47ಕ್ಕೆ ಅಪಘಾತ ಸಂಭವಿಸಿದೆ. ರವೀಂದ್ರ ನಗರ ಗಣಪತಿ ದೇವಸ್ಥಾನದ ಕಡೆಯ ರಸ್ತೆಯ ಸಿಗ್ನಲ್ ಆಗಷ್ಟೆ ಬಿಟ್ಟಿತ್ತು. ಹಾಗಾಗಿ ಕಾರು ಸರ್ಕಲ್ ದಾಟಿ ರೈಲ್ವೆ ನಿಲ್ದಾಣದ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಸವಳಂಗ ರಸ್ತೆಯ ಫ್ಲೈ ಓವರ್ ಇಳಿದು ಬಂದ ಆಂಬ್ಯುಲೆನ್ಸ್ ಅತಿ ವೇಗವಾಗಿ ಉಷಾ ನರ್ಸಿಂಗ್ ಹೋಂ ಸರ್ಕಲ್ಗೆ ನುಗ್ಗಿದೆ.

ಆಂಬ್ಯುಲೆನ್ಸ್ ಸರ್ಕಲ್ ಮಧ್ಯದಲ್ಲಿ ಅಳವಡಿಸಿರುವ ಸಿಗ್ನಲ್ ಸುತ್ತಿಕೊಂಡು ಬಂದಿದ್ದರೆ ಅಪಘಾತ ತಪ್ಪುವ ಸಾಧ್ಯತೆ ಇತ್ತು. ಆದರೆ ಚಾಲಕ ಏಕಾಏಕಿ ಬಲಕ್ಕೆ ತಿರುಗಿಸಿದ್ದಾನೆ. ಹಾಗಾಗಿ ಆಂಬ್ಯುಲೆನ್ಸ್ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ.
ಪಲ್ಟಿಯಾದ ಕಾರು, ಹಾರಿ ನಿಂತ ಆಂಬ್ಯುಲೆನ್ಸ್
ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಲಭಾಗಕ್ಕೆ ತಿರುಗಿ ಪಲ್ಟಿಯಾಗಿದೆ. ಅಲ್ಲದೆ ಉಲ್ಟಾ ಬಿದ್ದು ಒಂದು ಸುತ್ತು ಸುತ್ತಿದೆ. ಹಿಂಬದಿಯ ಗಾಜು ಒಡೆದಿದ್ದು ಅಲ್ಲಿಂದಲೇ ಮಹಿಳೆ ಹೊರ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ – ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?
ಇತ್ತ ಕಾರಿಗೆ ಡಿಕ್ಕಿ ಹೊಡೆದ ಬಳಿಕ ಅಂಬ್ಯುಲೆನ್ಸ್ ಒಂದು ಭಾರಿ ಮೇಲಕ್ಕೆ ಹಾರಿ ನಿಂತಿದೆ. ನಂತರ ಸರ್ಕಲ್ ಮಧ್ಯದ ಸಿಗ್ನಲ್ ಲೈಟ್ಗೆ ಡಿಕ್ಕಿ ಹೊಡೆದು ನಿಂತಿದೆ.

ತಕ್ಷಣ ನೆರವಿಗೆ ಧಾವಿಸಿದ ಜನ
ಘಟನೆಯಾದ ತಕ್ಷಣ ಸುತ್ತಮುತ್ತಲು ಇದ್ದ ಜನರು ನೆರವಿಗೆ ಧಾವಿಸಿದ್ದಾರೆ. ಪಲ್ಟಿಯಾದ ಕಾರಿನಲ್ಲಿದ್ದವರನ್ನು ಹೊರಗೆ ಎಳೆದು ಆರೈಕೆ ಮಾಡಿದ್ದಾರೆ. ಅಲ್ಲದೆ ಪಲ್ಟಿಯಾಗಿದ್ದ ಕಾರನ್ನು ಕೂಡಲೆ ಮೇಲೆತ್ತಿ ನಿಲ್ಲಿಸಿದ್ದಾರೆ.
ಡೋರ್ ತೆಗೆದು ಫೋನ್ ಹಿಡಿದು ಹೋದ ವ್ಯಕ್ತಿ..!

ಇತ್ತ ಅಪಘಾತವಾದ ತಕ್ಷಣ ಆಂಬುಲೆನ್ಸ್ನ ಎಡಭಾಗದ ಬಾಗಿಲು ತೆಗೆದು ವ್ಯಕ್ತಿಯೊಬ್ಬ ಕೆಳಗಿಳಿಯುವುದು ದೃಶ್ಯದಲ್ಲಿ ಸೆರೆಯಾಗಿದೆ. ಆತ ಮೊಬೈಲ್ ಫೋನ್ ಕಿವಿಗೆ ಹಿಡಿದುಕೊಂಡು ಅಪಘಾತದ ಸ್ಥಳದಿಂದ ಕಾಲ್ಕೀಳುತ್ತಾನೆ. ಇನ್ನೊಂದೆಡೆ ಅಂಬುಲೆನ್ಸ್ ಚಾಲಕ ಬಾಗಿಲು ತೆಗೆದು ಕೆಳಗಿಳಿಯಲು ಯತ್ನಿಸಿ ಕುಸಿದು ಬೀಳುತ್ತಾನೆ. ಇದನ್ನು ಗಮನಿಸಿದ ಜನರು ಕೂಡಲೆ ಆತನ ನೆರವಿಗೆ ಧಾವಿಸಿದರು.
ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

LATEST NEWS
- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

- ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

- ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

- ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

- ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು














