ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸಿಟಿ ಬಸ್ (City Bus) ಕಂಡಕ್ಟರ್ ಒಬ್ಬರ ಮೇಲೆ ಮತ್ತೊಂದು ಬಸ್ಸಿನ ಕಂಡಕ್ಟರ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಪಾಳದ ಕೊನೆ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಎಸ್.ಬಿ.ಎಂ. ಸಿಟಿ ಬಸ್ಸಿನ ಕಂಡಕ್ಟರ್ ರಾಘವೇಂದ್ರ ಎಂಬುವವರ ಮೇಲೆ ಹಲ್ಲೆಯಾಗಿದೆ.
ಇದನ್ನೂ ಓದಿ » ದೆವ್ವ ಬಿಡಿಸೋದಾಗಿ ಕೋಲಲ್ಲಿ ಹೊಡೆದು ಹಿಂಸೆ, ನೀರಿಗಾಗಿ ಅಂಗಲಾಚುತ್ತ ಪ್ರಾಣ ಬಿಟ್ಟ ಮಹಿಳೆ, ವಿಡಿಯೋ ವೈರಲ್
ನಿಲ್ದಾಣದಿಂದ ಬಸ್ ತಡವಾಗಿ ಹೊರಟಿದೆ ಎಂದು ಹಿಂದಿನ ಬಸ್ಸಿನ ಕಂಡಕ್ಟರ್ ಆರೋಪಿಸಿದ್ದಾರೆ. ಬಸ್ ತಡೆದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಹಿಂದಿನ ಬಸ್ಸಿನ ಕಂಡಕ್ಟರ್ ಮತ್ತು ಆತನ ಸಹಚರರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಟಿಕೆಟ್ ಕಲೆಕ್ಷನ್ ₹3500 ಹಣ ಕಳುವಾಗಿದೆ ಎಂದು ರಾಘವೇಂದ್ರ ದೂರಿನಲ್ಲಿ ಆರೋಪಿಸಿದ್ದಾರೆ.

ಗಾಯಗೊಂಡಿದ್ದ ಕಂಡಕ್ಟರ್ ರಾಘವೇಂದ್ರ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್‌ಡೇಟ್

About The Editor
ನಿತಿನ್ ಆರ್.ಕೈದೊಟ್ಲು















