ಶಿವಮೊಗ್ಗದಲ್ಲಿ ಬೈಕ್ ಪಕ್ಕ ಬೈಕ್ ನಿಲ್ಲಿಸಿದ್ದಕ್ಕೆ ಜಗಳ, ವೃದ್ಧನ ಮೇಲೆ ಹಲ್ಲೆ, ತಲೆಗೆ ಗಾಯ

Published On : ಮಾರ್ಚ್ 30, 2022

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 30 ಮಾರ್ಚ್ 2022

ಕ್ಷುಲಕ ವಿಚಾರಕ್ಕೆ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಟ್ಯಾಂಕ್ ಮೊಹಲ್ಲಾದ ಸಯ್ಯದ್ ಬಷೀರ್ (65) ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ತಲೆ, ಮೊಣಕೈಗೆ ಗಾಯವಾಗಿದೆ. ಘಟನೆ ಸಂಬಂಧ ಪ್ರಶಾಂತ್ (22) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಹಲ್ಲೆಗೆ ಕಾರಣವೇನು?

ಟ್ಯಾಂಕ್ ಮೊಹಲ್ಲಾದ 6ನೇ ಕ್ರಾಸ್’ನಲ್ಲಿ ಸಯ್ಯದ್ ಬಷೀರ್ ಅವರು ಪ್ರಶಾಂತನಿಗೆ ಸೇರಿದ ಬೈಕ್ ಪಕ್ಕದಲ್ಲಿ ತಮ್ಮ ಬೈಕ್ ನಿಲ್ಲಿಸಿದ್ದರು. ಇದರಿಂದ ಪ್ರಶಾಂತನ ಬೈಕ್’ಗೆ ಸ್ಕ್ರಾಚ್ ಆಗಿದೆ. ಇದರಿಂದ ಕುಪಿತಗೊಂಡ ಪ್ರಶಾಂತ್ ಸಯ್ಯದ್ ಬಷೀರ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕುವಿನಿಂದ ತಿವಿದರು

ಪ್ರಶಾಂತ್ ಹಲ್ಲೆ ನಡೆಸಿದ್ದರಿಂದ ಕೆಳಗೆ ಬಿದ್ದ ಸಯ್ಯದ್ ಬಷೀರ್ ಅವರ ತಲೆ ಹಿಂಭಾಗಕ್ಕೆ ಗಾಯವಾಗಿದ್ದು, ರಕ್ತ ಬಂದಿದೆ. ಎಡಗೈ ಮೊಣಕೈಗೂ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 30, 2022

Leave a Comment