ಕಾರು ತಡೆದು 15 ಲಕ್ಷ ಹಣ ದರೋಡೆ ಕೇಸ್‌ಗೆ ಬಿಗ್ ಟ್ವಿಸ್ಟ್, ದೂರು ಕೊಟ್ಟವನೆ ಈಗ ಅರೆಸ್ಟ್, ಯಾಕೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

127274692 1014930312320212 3941508665650730447 o.jpg? nc cat=102&ccb=2& nc sid=730e14& nc ohc=BXiPCZgCpikAX SL0KC& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ |SORABA NEWS | 29 NOVEMBER 2020

ಸೊರಬ ತಾಲೂಕಿನ ತವನಂದಿ – ಕೊರಕೋಡು ಗ್ರಾಮದ ಬಳಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‍ ಸಿಕ್ಕಿದೆ. ದೂರು ನೀಡಿದವನೆ ಈಗ ಅರೆಸ್ಟ್ ಆಗಿದ್ದಾನೆ.

ದೂರು ಕೊಟ್ಟವನ ಬಂಧನವೇಕೆ?

ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದರೋಡೆ ಪ್ರಕರಣ ಸಂಬಂಧ ಕಾರು ಚಾಲಕ ನಫೀಸ್ ಆಲಂ, ಕನ್ನಪ್ಪ ಮತ್ತು  ವಿಶ್ವನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಕಾರು ಚಾಲಕ ನಫೀಸ್ ಆಲಂ ಈ ಪ್ರಕರಣದಲ್ಲಿ ದೂರುದಾರನಾಗಿದ್ದ. ಆತನನ್ನೇ ಬಂಧಿಸಿದರುವುದು ಅಚ್ಚರಿ ಮೂಡಿಸಿದೆ. ಆದರೆ ತನಿಖೆ ವೇಳೆ ನಫೀಸ್ ಆಲಂ ದರೋಡೆಯ ಕಥೆಯ ಸೃಷ್ಟಿಕರ್ತ ಅನ್ನುವುದು ತಿಳಿದು ಬಂದಿದೆ.

ದೋರಡೆಯೇ ಆಗಿರಲಿಲ್ಲ

ಸಾಗರದ ಅಡಕೆ ವರ್ತಕರೊಬ್ಬರಿಗೆ ಸೇರಿದ 15 ಲಕ್ಷ ರೂ. ಹಣವನ್ನು ಕಾರಿನಲ್ಲಿ ತರಲಾಗುತ್ತಿತ್ತು. ಮಂಗಳವಾರ ರಾತ್ರಿ ಸೊರಬದ ತವನಂದಿ – ಕೊರಕೋಡು ಗ್ರಾಮದ ಬಳಿ ದರೋಡೆಕೋರರು ಅಡ್ಡಗಟ್ಟಿ, ಹಲ್ಲೆ ನಡೆಸಿ, ಕಾರು ಮತ್ತು ಹಣದ ಜೊತೆಗೆ ಎಸ್ಕೇಪ್ ಅಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದರಿಂದ ಆನವಟ್ಟಿಯಲ್ಲಿ ಭಾರಿ ಆತಂಕ ಮೂಡಿತ್ತು.

ವಿಚಾರಣೆ ವೇಳೆ ಬಣ್ಣ ಬಯಲು

ದರೋಡೆಯ ಮರುದಿನವೇ ಕಾರು ಮತ್ತು 7.5 ಲಕ್ಷ ರೂ. ಹಣ ಬನವಾಸಿ ಸಮೀಪ ಪತ್ತೆಯಾಗಿತ್ತು. ಮಹಾರಾಷ್ಟ್ರದಿಂದ ಬರುವಾಗ ಚಾಲಕ ನಫೀಸ್‍ ಜೊತೆಗಿದ್ದ ಅನ್ಸರ್ ಅಹಮದ್‍ ಎಂಬಾತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಅನ್ಸರ್ ಅಹಮದ್ ಹಲವು ಸಂಗತಿ ಬಾಯಿಬಿಟ್ಟಿದ್ದ. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ನಫೀಸ್‍ ಆಲಂನ ಕಳ್ಳಾಟ ಗೊತ್ತಾಗಿದೆ. ಹಣ ಕಬಳಿಸುವ ಉದ್ದೇಶದಿಂದ ನಫೀಸ್ ಆಲಂ ದರೋಡೆಯ ನಾಟಕ ಆಡಿದ್ದ ಎಂದು ತಿಳಿದು ಬಂದಿದೆ.

ಮೂರು ತಂಡ ರಚಿಸಲಾಗಿತ್ತು

ದರೋಡೆ ಪ್ರಕರಣದ ತನಿಖೆಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಮೂರು ತಂಡ ರಚಿಸಿದ್ದರು. ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಶಿಕಾರಿಪುರ ಹೆಚ್ಚುವರಿ ರಕ್ಷಣಾಧಿಕಾರಿ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ಆರ್‍.ಡಿ.ಮರುಳಸಿದ್ದಪ್ಪ ನೇತೃತ್ವದಲ್ಲಿ ಸೊರಬ ಪಿಎಸ್ಐ ಟಿ.ಬಿ.ಪ್ರಶಾಂತ್ ಕುಮಾರ್, ಆನವಟ್ಟಿ ಪಿಎಸ್ಐ ಪ್ರವೀಣ್ ಕುಮಾರ್, ಶಿಕಾರಿಪುರ ಸಿಪಿಐ ಗುರುರಾಜ್ ಮೈಲಾರ್ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿಕಾರಿಪುರ ಠಾಣೆಯ ಪ್ರಶಾಂತ್, ಶಿವಕುಮಾರ್, ಆದರ್ಶ, ವಿನಯ್, ಸೊರಬ ಠಾಣೆಯ ಸಲ್ಮಾನ್‍ ಖಾನ್ ಹಾಜಿ, ದಿನೇಶ್, ಜಗದೀಶ್, ಆನವಟ್ಟಿ ಠಾಣೆಯ ಗಿರೀಶ್, ಟೀಕಪ್ಪ, ತಿರುಕಪ್ಪ, ಜಗದೀಶ್ ಉಪ್ಪಾರ್ ಪಾಲ್ಗೊಂಡಿದ್ದರು.

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment