ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರ ಸ್ಟೇಟಸ್ (status) ಪ್ರಕಟಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಗರ ಸಮಿತಿ ವತಿಯಿಂದ ಆಗ್ರಹಿಸಲಾಯಿತು.
ಕೋಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ನಿಯೋಗ, ಪಾಕಿಸ್ತಾನದ ಪರವಾಗಿ ಪೋಸ್ಟ್ ಪ್ರಕಟಿಸಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಎಂಎಲ್‌ಎ ಹೇಳಿದ್ದೇನು?
ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗದಲ್ಲಿ ದೇಶದ್ರೋಹಿಗಳಿದ್ದಾರೆ ಎಂದು ಹೇಳುತ್ತಿದ್ದೆವು. ಈಗ ಕೋಟೆ ಮತ್ತು ತುಂಗಾ ನಗರ ಠಾಣೆಗಳಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಪಾಕಿಸ್ತಾನಕ್ಕೆ ಒಳ್ಳೆಯದಾಗಲಿ ಎಂದು ಅಲ್ಲಾಹುವಿನಲ್ಲಿ ಬೇಡಿಕೊಂಡು ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ. ದೇಶದ್ರೋಹಿಗಳಿಗೆ ಅಲ್ಲ ಮತ್ತು ರಾಮ ಯಾರು ಸಹಕಾರ ನೀಡಬಾರದು. ದೇಶದ್ರೋಹಿಗಳ ಕುಟುಂಬವನ್ನು ಹುಡುಕಿ ತಕ್ಕ ಶಾಸ್ತಿ ಮಾಡಬೇಕು. ರಕ್ಷಣಾಧಿಕಾರಿಗಳು ತಕ್ಕ ಕ್ರಮ ಕೈಗೊಳ್ಳಬೇಕು.
– ಎಸ್.ಎನ್.ಚನ್ನಬಸಪ್ಪ, ಶಾಸಕ
ಪ್ರಮುಖರಾದ ಎಸ್.ದತ್ತಾತ್ರಿ, ದೀನದಯಾಳು, ಮೋಹನ್ ರೆಡ್ಡಿ, ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಇದ್ದರು.

ಏನಿದು ಪ್ರಕರಣ?
ಶಿವಮೊಗ್ಗದ ನಿವಾಸಿ ಇಬ್ರಾಹಿಂ ಎಂಬಾತ ವಾಟ್ಸಪ್‌ನಲ್ಲಿ ಪಾಕಿಸ್ತಾನದ ಪರವಾಗಿ ಸ್ಟೇಟಸ್ ಪ್ರಕಟಿಸಿದ್ದ ಎಂದು ಆರೋಪಿಸಲಾಗಿದೆ. ಪಾಕಿಸ್ತಾನವನ್ನು ರಕ್ಷಿಸುವಂತೆ ಅಲ್ಲಾಹುವಿನಲ್ಲಿ ಬೇಡಿಕೊಳ್ಳುವ ರೀತಿ ಪೋಸ್ಟ್ ಹಾಕಲಾಗಿದೆ ಎಂದು ಪ್ರಕರಣ ದಾಖಲಾಗಿದೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಮಂಡ್ಲಿ ದೇವಸ್ಥಾನಕ್ಕೆ ರಂಭಾಪುರ ಶ್ರೀ ಭೂಮಿ ಪೂಜೆ, ಏನೆಲ್ಲ ಆಶೀರ್ವಚನ ನೀಡಿದರು?
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















