ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 OCTOBER 2023
SHIMOGA : ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೊ ಮತ್ತು ಹೆಸರ ದುರ್ಬಳಕೆ ಮಾಡಿ, ಅಪಪ್ರಚಾರ ಮಾಡಿದ ಆರೋಪದ ಹಿನ್ನೆಲೆ ಮೂರು ಮಹಿಳೆಯರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಕೇಸ್ 1 : ಇನ್‌ಸ್ಟಾಗ್ರಾಂನಲ್ಲಿ ಯುವತಿ ಫೋಟೊ
ಅನುಮತಿ ಇಲ್ಲದೆ ವಿದ್ಯಾರ್ಥಿನಿಯೊಬ್ಬಳ (ಹೆಸರು ಗೌಪ್ಯ) ಫೋಟೊ ಬಳಸಿ ಆಕೆಯ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಐಡಿ ಕ್ರಿಯೇಟ್ ಮಾಡಲಾಗಿತ್ತು. ಬಳಿಕ ಆಕೆಯ ಅಧಿಕೃತ ಖಾತೆಗೆ ಮೆಸೇಜ್ ಮಾಡಲಾಗಿದೆ. ಅಲ್ಲದೆ ಇಂಟರ್‌ನೆಟ್ ಕಾಲ್ ಮಾಡಿ ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬದವರಿಗೆ ಕರೆ ಮಾಡಿ ಇಲ್ಲಸಲ್ಲದ ವಿಚಾರ ಹೇಳಿ ಕಿರಿಕಿರಿ ಉಂಟು ಮಾಡಲಾಗುತ್ತಿತ್ತು. ಈ ಹಿನ್ನೆಲೆ ವಿದ್ಯಾರ್ಥಿನಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೇಸ್ 2 : ಫೇಸ್‌ಬುಕ್‌ನಲ್ಲಿ ಅವಹೇಳನ
ಗೃಹಿಣಿಯೊಬ್ಬರ (ಹೆಸರು ಗೌಪ್ಯ) ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿ ಆಕೆಯ ಎರಡು ಫೋಟೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದ ಆರೋಪ ಸಂಬಂಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸುವಂತೆ ಗೃಹಿಣಿ ದೂರು ನೀಡಿದ್ದಾರೆ.
ಕೇಸ್ 3 : ಪ್ರಿಯಕರನ ಮೇಲೆ ಶಂಕೆ
ಪ್ರಿಯಕರನ ಜೊತೆ ಮಾತು ನಿಲ್ಲಿಸಿದ್ದಕ್ಕೆ ದ್ವೇಷದಿಂದ ತನ್ನ ನಕಲಿ ಖಾತೆ ಸೃಷ್ಟಿಸಿ ಖಾಸಗಿ ಫೋಟೊ, ವಿಡಿಯೋ, ಎಡಿಟ್ ಮಾಡಿದ ಫೋಟೊ, ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು (ಹೆಸರು ಗೌಪ್ಯ) ದೂರು ನೀಡಿದ್ದಾರೆ. ತನ್ನ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ತನ್ನ ಪರಿಚಿತರನ್ನು ಫಾಲೋ ಮಾಡುತ್ತ, ಅವರೊಂದಿಗೆ ಚಾಟಿಂಗ್ ಮಾಡಿ ತನ್ನ ಹೆಸರಿಗೆ ಕಳಂಕ ತರಲಾಗುತ್ತಿದೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಅನುಮತಿ ಇಲ್ಲದೆ ಫೋಟೊ ಬಳಸುವಂತಿಲ್ಲ
ಸಾಮಾಜಿಕ ಜಾಲತಾಣದಲ್ಲಿ ಅನುಮತಿ ಇಲ್ಲದೆ ಪೋಟೊ ಬಳಕೆ ಅಪರಾಧ. ಯಾರದ್ದೋ ಫೋಟೊ ಬಳಕೆ, ನಕಲಿ ಖಾತೆಗಳನ್ನು ಸೃಷ್ಟಿಸುವಂತಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ರ ಅಡಿ ಶಿಕ್ಷಾರ್ಹವಾಗಿದೆ. ಇಂತಹ ಕೃತ್ಯ ಎಸಗಿದ ಹಲವರ ವಿರುದ್ಧ ಈಗಾಗಲೇ ಶಿಕ್ಷೆಯಾಗಿದೆ. ಶಿವಮೊಗ್ಗದ ಮೂರು ಪ್ರಕರಣಗಳಲ್ಲಿ ಫೋಟೊ ದರ್ಬಳಕೆ ಮಾಡಿದವರು ಮತ್ತು ತೇಜೋವಧೆ ಮಾಡುವ ಪೋಸ್ಟ್ ಪ್ರಕಟಿಸಿದ ಆರೋಪ ಸಾಬೀತಾದರೆ ಆರೋಪಿಗಳಿಗೆ ಶಿಕ್ಷೆ ನಿಶ್ಚಿತ.
ಇದನ್ನೂ ಓದಿ – ಫೇಸ್‌ಬುಕ್‌ನಲ್ಲಿ ಜಾಹೀರಾತು, ಫೋನಿನಲ್ಲಿ ಬಣ್ಣ ಬಣ್ಣದ ಮಾತು, ನಂಬಿದ ಶಿವಮೊಗ್ಗದ ವ್ಯಕ್ತಿಗೆ ಆಘಾತ ಕಾದಿತ್ತು, ಏನಿದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422