ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ : ಬ್ಯೂಟಿ ಪಾರ್ಲರ್‌ನ ಇಂಟೀರಿಯರ್ (Interior Design) ಕೆಲಸಕ್ಕೆ ಬಂದವರು ರಾತ್ರೋರಾತ್ರಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮರುದಿನ ಬೆಳಗ್ಗೆ ಬ್ಯೂಟಿ ಪಾರ್ಲರ್ ಮಾಲೀಕರು ಅಲ್ಲಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿನೋಬನಗರ 60 ಅಡಿ ರಸ್ತೆಯ ಶುಭಮಂಗಳ ಕಲ್ಯಾಣ ಮಂಟಪದ ಬಳಿ ನೇತ್ರಾವತಿ ಎಂಬುವವರು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು, ಅದರ ಇಂಟೀರಿಯರ್ ಡಿಸೈನಿಂಗ್ ಕೆಲಸ ಮಾಡಿಸುತ್ತಿದ್ದರು. ತಮಿಳುನಾಡಿನಿಂದ ಬಂದಿದ್ದ ಐವರು ಇಲ್ಲಿ ಕೆಲಸ ಮಾಡಿಕೊಂಡು, ರಾತ್ರಿ ವೇಳೆ ಬ್ಯೂಟಿ ಪಾರ್ಲರ್‌ನಲ್ಲಿಯೆ ಉಳಿದುಕೊಳ್ಳುತ್ತಿದ್ದರು.
ಸಿಸಿಟಿವಿ ಪರಿಶೀಲಿಸಿದಾಗ ಶಾಕ್

ಮಾ.14ರಂದು ಬೆಳಗ್ಗೆ ಬ್ಯೂಟಿ ಪಾರ್ಲರ್ ಮಾಲೀಕರಾದ ನೇತ್ರಾವತಿ ಅವರು ಅಂಗಡಿ ಬಳಿ ಬಂದಾಗ ಬಾಗಿಲು ಹಾಕಿತ್ತು. ಬೀಗ ಕೆಳಗೆ ಬಿದ್ದಿತ್ತು. ಬಾಗಿಲು ತೆಗೆದು ನೋಡಿದಾಗ ಒಳಗಿದ್ದ ವಸ್ತುಗಳು ಮತ್ತು ಕೆಲಸಕ್ಕೆ ಬಂದವರು ಕಾಣೆಯಾಗಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಐವರು ಕೆಲಸಗಾರರು (Interior Design) ರಾತ್ರೋರಾತ್ರಿ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹೊತ್ತೊಯ್ಯುತ್ತಿರುವುದು ಸೆರೆಯಾಗಿತ್ತು.
ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ
ಘಟನೆ ಸಂಬಂಧ ರಾಮಮೂರ್ತಿ, ಕಿಶೋರ್, ನರೇಶ್, ದೀಪಕ್, ಸಂದೀಪ್ ಎಂಬುವವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



