ಸೋಮಿನಕೊಪ್ಪದಲ್ಲಿ ಮನೆ ಬಳಿ ಕಟ್ಟಿದ್ದ ಹಸು ನಾಪತ್ತೆ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ನಗರದ ಸೋಮಿನಕೊಪ್ಪದಲ್ಲಿ ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಸೋಮಿನಕೊಪ್ಪ ನಿವಾಸಿ, ರೈತ ಶೇಖ್ ಅಯಾಜ್ ಎಂಬುವವರು ತಮ್ಮ ಹಸುಗಳನ್ನು ಮೇಯಿಸಿಕೊಂಡು ಬಂದು ಮನೆಯ ಪಕ್ಕದ ರಸ್ತೆಯಲ್ಲಿ ಕಟ್ಟಿಹಾಕಿದ್ದರು. ಮರುದಿನ ಮುಂಜಾನೆ 4 ಗಂಟೆಗೆ ಎದ್ದು ನೋಡಿದಾಗ ಕಟ್ಟಿಹಾಕಿದ್ದ ಹಸುಗಳಲ್ಲಿ ₹60,000 ಮೌಲ್ಯದ ಬಿಳಿ ಬಣ್ಣದ ಹಸುವೊಂದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

Shimoga-Police-Jeep

ಕಾಣೆಯಾದ ಹಸುವಿಗಾಗಿ ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಹಸುವಿನ ಸುಳಿವು ಸಿಗಲಿಲ್ಲ. ಈ ಹಿನ್ನೆಲೆ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.