NEWS HIGHLIGHTS
ಭದ್ರಾವತಿ: ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಯೋಜನೆಯ ಪೈಪ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ರಾಕೇಶ (30) ಬಂಧಿತ ಆರೋಪಿ. ಈತನಿಂದ ₹7,92,000 ಅಂದಾಜು ಮೌಲ್ಯದ 18 ಬಂಡಲು ಪೈಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯೋಜನೆಗಾಗಿ ತರಲಾಗಿದ್ದ ಪೈಪ್ ಬಂಡಲುಗಳು ಕಳುವಾದ ಬಗ್ಗೆ ಇಂಜಿನಿಯರ್ ಅವಿನಾಶ್ ಅವರು ಜೂನ್ 11ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಪತ್ತೆಗಾಗಿ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ರಾಕೇಶನನ್ನು ಬಂಧಿಸಿದೆ.