ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MAY 2023
SHIMOGA : ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ (customer care) ಅಧಿಕಾರಿ ಎಂದು ನಂಬಿಸಿ ರೈತರೊಬ್ಬರಿಗೆ 1.85 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
24 ಗಂಟೆಯ ಗುಡುವಿನ ಮೆಸೇಜ್
ಸೊರಬ ತಾಲೂಕಿನ ರೈತರೊಬ್ಬರ ಮೊಬೈಲ್ಗೆ ಮೇ 18ರಂದು ಸಂಜೆ 7 ಗಂಟೆಗೆ ಕೆನರಾ ಬ್ಯಾಂಕ್ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕು ಇಲ್ಲವಾದಲ್ಲಿ 24 ಗಂಟೆಯಲ್ಲಿ ನಿಮ್ಮ ಖಾತೆ ಬ್ಲಾಕ್ ಅಗಲಿದೆ. ಎಟಿಎಂ ಕಾರ್ಡ್ ಅವಧಿಯು ಮುಗಿಯಲಿದೆ ಎಂದು ಎಚ್ಚರಿಸಲಾಗಿತ್ತು. ಕೂಡಲೆ ಕಸ್ಟಮರ್ ಕೇರ್ (customer care) ನಂಬರ್ಗೆ ಕರೆ ಮಾಡಿ ಎಂದು ತಿಳಿಸಲಾಗಿತ್ತು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಕೆಲವೇ ಹೊತ್ತಲ್ಲಿ ಹಣ ಮಾಯ
ಕೆನರಾ ಬ್ಯಾಂಕಿನಿಂದಲೇ ಮಸೇಜ್ ಬಂದಿರಬೇಕು ಎಂದು ನಂಬಿದ ರೈತ, ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ಅಧಿಕಾರಿ ಸೋಗಿನಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆಯ ವಿವರಗಳು, ಒಟಿಪಿ ನಂಬರ್ ಪಡೆದುಕೊಂಡಿದ್ದಾನೆ. ಇದಾಗಿ ಕೆಲವೇ ಹೊತ್ತಿನಲ್ಲಿ ರೈತನ ಖಾತೆಯಲ್ಲಿದ್ದ 1.85 ಲಕ್ಷ ರೂ. ಹಣ ಡ್ರಾ ಆಗಿರುವುದಾಗಿ ರೈತನ ಮೊಬೈಲ್ಗೆ ಮೆಸೇಜ್ ಬಂದಿದೆ. ಆತಂಕಗೊಂಡ ರೈತ, ತನ್ನ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿಮಗು ಬರಬಹುದು ಇಂತಹ ಮೆಸೇಜ್
ಬ್ಯಾಂಕ್ ಹೆಸರಿನಲ್ಲಿ ಮೆಸೇಜ್ ಕಳುಹಿಸಿ ಜನರನ್ನು ಗಲಿಬಿಲಿಗೊಳಿಸಿ, ಒಟಿಪಿ ಪಡೆದು ವಂಚಿಸುತ್ತಿರುವ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಇಂತಹ ಮೆಸೇಜುಗಳು ನಿಮಗೂ ಬರಬಹುದು. ಆ ಸಂದರ್ಭ ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗೆ ತೆರಳಿ ಮ್ಯಾನೇಜರ್ ಅಥವಾ ಇತರೆ ಸಿಬ್ಬಂದಿಯನ್ನು ವಿಚಾರಿಸಿದರೆ ಅಸಲಿ ಸಂಗತಿ ಗೊತ್ತಾಗಲಿದೆ. ಪ್ರತಿ ಬ್ಯಾಂಕ್ ತನ್ನದೆ ಪ್ರತ್ಯೇಕ ಕಸ್ಟಮರ್ ಕೇರ್ ನಂಬರ್ ಹೊಂದಿರುತ್ತದೆ. ತುರ್ತು ಸಂದರ್ಭ ಬ್ಯಾಂಕಿನ ಅಧಿಕೃತ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡುವದರಿಂದ ವಂಚಕರ ಜಾಲಕ್ಕೆ ಬೀಳುವುದು ತಪ್ಪಲಿದೆ.
ಇದನ್ನೂ ಓದಿ – ನೀವು ಇನ್ನೂ ಶಿವಮೊಗ್ಗ ಲೈವ್ ವಾಟ್ಸಪ್ ಗ್ರೂಪ್ ಸೇರಿಲ್ಲವಾ? ಈಗಲೆ ಇಲ್ಲಿ ಕ್ಲಿಕ್ ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422