ಶಿವಮೊಗ್ಗ: ಚಿನ್ನಾಭರಣ ಅಂಗಡಿಯಲ್ಲಿ ಚಿನ್ನದ ಉಂಗುರ ಖರೀದಿಸಿದ ವ್ಯಕ್ತಿಯೊಬ್ಬ ಆನ್‌ಲೈನ್ (phonepe) ಮೂಲಕ ಹಣ ಪಾವತಿಸಿದಂತೆ ನಟಿಸಿ ನಂತರ ವ್ಯಾಪಾರಿಯ ಬ್ಯಾಂಕ್ ಖಾತೆಯನ್ನೇ ಫ್ರೀಜ್ ಮಾಡಿಸಿದ್ದಾನೆ. ಆತಂಕಕ್ಕೀಡಾದ ವ್ಯಾಪಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಇದನ್ನೂ ಓದಿ : ಶಿವಮೊಗ್ಗದ ಐಎಎಸ್ ಅಧಿಕಾರಿ ಹೆಸರಿನಲ್ಲಿ ವಂಚಿಸಲು ಯತ್ನ, ದಾಖಲಾಯ್ತು ಪ್ರಕರಣ

ಫೋನ್ ಪೇ ಮೂಲಕ ಹಣ ಪಾವತಿ
ನಗರದ ಗಾಂಧಿಬಜಾರ್‌ನ (Gandhi Bazaar) ಷಾ ಘವರ್ ಚಂದ್ ಪೆರಾಜಿ ಜ್ಯೂವೆಲರಿ ಅಂಗಡಿಗೆ (jeweler) ಬಂದಿದ್ದ ನಿಂಗಪ್ಪ ಎಂ. ಮುದೂರ ಎಂಬಾತ, ಮಾಲೀಕ ಭವಿಕ್ ಎಂ. ಜೈನ್ ಅವರಿಂದ ₹75,500 ಮೌಲ್ಯದ 4 ಗ್ರಾಂ 990 ಮಿಲಿ ತೂಕದ ಬಂಗಾರದ ಉಂಗುರ (Gold Ring) ಖರೀದಿಸಿದ್ದ. ಬಳಿಕ ₹500 ಮುಂಗಡ ಹಣ ನೀಡಿ, ಉಳಿದ ₹75,000 ಹಣವನ್ನು ಮಾಲೀಕರ ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ ವರ್ಗಾಯಿಸಿ ಉಂಗುರ ಖರೀದಿಸಿ ತೆರಳಿದ್ದ.

ಬ್ಯಾಂಕ್ ಖಾತೆಯೇ ಫ್ರೀಜ್
ಮರುದಿನ ಮಾಲೀಕ ಹಣ ಡ್ರಾ ಮಾಡಲು ಬ್ಯಾಂಕಿಗೆ (Bank) ಹೋದಾಗ ಅವರ ಖಾತೆ ಫ್ರೀಜ್ (Account Freeze) ಆಗಿರುವುದು ತಿಳಿದು ಬಂದಿದೆ. ನಿಂಗಪ್ಪ ಚಿನ್ನದ ಅಂಗಡಿ ಮಾಲೀಕನ ಖಾತೆಗೆ ಹಣ ವರ್ಗಾಯಿಸಿ ಬಳಿಕ ತಪ್ಪಾಗಿ ವರ್ಗಾಯಿಸಿರುವುದಾಗಿ ಸೈಬರ್ ಕ್ರೈಂಗೆ ಸುಳ್ಳು ದೂರು ನೀಡಿದ್ದ. ಇದರಿಂದ ಚಿನ್ನದ ಅಂಗಡಿ ಮಾಲೀಕ ಬ್ಯಾಂಕ್ ಖಾತೆ ಲಾಕ್ ಆಗಿತ್ತು. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
