SHIVAMOGGA LIVE NEWS | 5 DECEMBER 2022
ಶಿವಮೊಗ್ಗ : ಕಾಡಿನಲ್ಲಿ ಬರ್ತಡೆ ಪಾರ್ಟಿ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ಒಂದು ಲಕ್ಷ ರೂ. ದರೋಡೆ ಮಾಡಿದ್ದ ಗ್ಯಾಂಗನ್ನು (dacoity gang) ಪೊಲೀಸರು ಬಂಧಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಶಫೀವುಲ್ಲಾ (35), ಶೇಷಾದ್ರಿಪುರಂನ ಮಾರುತಿ ಅಲಿಯಾಸ್ ಕ್ಯಾಂಡಿ (28), ಮೆಹದಿ ನಗರದ ಆವೇಜ್ ಅಲಿ (22), ಬಸವನಗುಡಿಯ ಹೊನ್ನೇಶ್ ಅಲಿಯಾಸ್ ಚಿನ್ನು (24), ಗಣೇಶ್ (22), ವಿನೋದ (19) ಬಂಧಿತರು. ಇನ್ನು 6 ಮಂದಿ ತಲೆಮರೆಸಿಕೊಂಡಿದ್ದಾರೆ. ಅವರ ಶೋಧ ಕಾರ್ಯ ನಡೆಯುತ್ತಿದೆ.
(dacoity gang)
ಮಾಸ್ಕ್ ಹಾಕಿಕೊಂಡು ಬಂದಿದ್ದರು
ಶಿವಮೊಗ್ಗದ ಯತೀಶ್ ಮತ್ತು ಆತನ ಸ್ನೇಹಿತರು ವೀರಣ್ಣ ಬೆನವಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮಾಸ್ಕ್ ಧರಿಸಿ ಬೈಕುಗಳಲ್ಲಿ ಬಂದ 12 ಅಪರಿಚಿತರು, ಪಾರ್ಟಿ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಎಲ್ಲರಿಗು ಹೊಡೆದು ಒಂದು ಲಕ್ಷ ರೂ. ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
(dacoity gang)
ಹರಿದ ಮಾಸ್ಕ್ ನೀಡಿತು ಸುಳಿವು
ದರೋಡೆ ಮಾಡಿಕೊಂಡು ಪರಾರಿಯಾಗುತ್ತಿದ್ದಾಗ ಗ್ಯಾಂಗಿನಲ್ಲಿದ್ದ ಒಬ್ಬನ ಮಾಸ್ಕ್ ಹರಿದು ಹೋಗಿದೆ. ಪಾರ್ಟಿ ಮಾಡುತ್ತಿದ್ದವರಿಗೆ ಆತನ ಗುರುತು ಪತ್ತೆಯಾಗಿದೆ. ಟ್ಯಾಂಕ್ ಮೊಹಲ್ಲಾದ ಶಫಿ ಎಂಬುದು ಖಚಿತವಾಗಿದೆ. ಈ ಹಿನ್ನೆಲೆ ಕುಂಸಿ ಪೊಲೀಸ್ ಠಾಣೆಯಲ್ಲಿ ಶಫಿ ಮತ್ತು ಇತರರ ವಿರುದ್ಧ ದೂರು ನೀಡಿದ್ದರು.
ALSO READ – 5 ದಿನ ಬಿಟ್ಟು ಶಿವಮೊಗ್ಗದ ಮನೆಗೆ ಬಂದ ದಂಪತಿ ರೂಮೊಳಗೆ ಹೋಗುತ್ತಿದ್ದಂತೆ ಕಾದಿತ್ತು ಶಾಕ್
ತನಿಖೆ ನಡಸಿದ ಪೊಲೀಸರು ಶಫಿ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಒಂದು ಬೈಕ್, ಐದು ಮೊಬೈಲ್ ಫೋನ್ ಮತ್ತು 830 ರೂ. ನಗದು ವಶಕ್ಕೆ ಪಡೆದಿದ್ದಾರೆ. ಕುಂಸಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.