ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 7 JUNE 2023
ಘಟನೆ 1 : ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿ
ವಿನೋಬನಗರದ ಜೈ ಪ್ರಕಾಶ್ ಮಲ್ನಾಡ್ ಎಂಬುವವರು ರಸ್ತೆಯ (Highway) ಎಡಬದಿಯಲ್ಲಿ ನಡೆದು ಹೋಗುತ್ತಿದ್ದರು. ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಜೈ ಪ್ರಕಾಶ ಮಲ್ನಾಡ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಜೂ.8ರಂದು ಶ್ರೀರಾಂಪುರ ಬಳಿ ರಾತ್ರಿ ಈ ಘಟನೆ ಸಂಭವಿಸಿದೆ.
ಘಟನೆ 2 : ರಾಂಗ್ ಸೈಡ್ನಲ್ಲಿ ಹೋಗಿ ಡಿಕ್ಕಿ
ಪಿಇಎಸ್ ಕಾಲೇಜು ಮುಂಬಾಗ ಇನ್ನೋವಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೈಕ್ ಸವಾರರು ರಾಂಗ್ ಸೈಡ್ನಲ್ಲಿ ಬಂದಿದ್ದೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಜೂ.5ರಂದು ಘಟನೆ ಸಂಭವಿಸಿತ್ತು.
ಇದನ್ನೂ ಓದಿ – ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಇನ್ನೋವಾ, ಬೈಕ್ ಮುಖಾಮುಖಿ ಡಿಕ್ಕಿ, ಸಿಸಿಟಿವಿ ದೃಶ್ಯ ಹೇಳಿತು ಸಾಕ್ಷಿ
ಒಂದೇ ವಾರದಲ್ಲಿ ಅರ್ಧ ಕಿ.ಮೀ ಅಂತರದಲ್ಲಿ ಎರಡು ಅಪಘಾತ ಸಂಭವಿಸಿದೆ. ಮೇಲ್ನೋಟಕ್ಕೆ ಚಾಲಕರ ನಿರ್ಲಕ್ಷ್ಯ ಅನಿಸಿದರು, ಹೆದ್ದಾರಿ (Highway) ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಇದ್ದರೆ ಇನ್ನಷ್ಟು ಸಾವು, ನೋವು ಸಂಭವಿಸಲಿದೆ. ಇದು ಶಿವಮೊಗ್ಗ – ಸಾಗರ ಹೆದ್ದಾರಿಯ ಶ್ರೀರಾಮಪುರ ಗ್ರಾಮದ ಬಳಿಯ ಸದ್ಯದ ಸ್ಥಿತಿ.
ಏನಾಗ್ತಿದೆ ಇಲ್ಲಿ?
ಶಿವಮೊಗ್ಗ – ಸಾಗರ ಹೆದ್ದಾರಿಗೆ ತುಮಕೂರು – ಶಿವಮೊಗ್ಗ ಚತುಷ್ಪತ ರಸ್ತೆ ಸೇರ್ಪಡೆಯಾಗಲಿದೆ. ಶ್ರೀರಾಮಪುರ ಬಳಿ ಕಾಮಗಾರಿ ನಡೆಯುತ್ತಿದೆ. ಅಂಡರ್ ಪಾಸ್ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆ ಡಬಲ್ ರೋಡ್ನಲ್ಲಿ ಒಂದು ಬದಿ ಸಂಚಾರ ಬಂದ್ ಮಾಡಲಾಗಿದೆ. ಮತ್ತೊಂದು ಬದಿಯಲ್ಲಿ ಟು ವೇ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಟು ವೇ ರಸ್ತೆಯಲ್ಲಿ ಒನ್ ವೇ
ಆಲ್ಕೊಳ ಕಡೆಯಿಂದ ಬರುವ ವಾಹನಗಳು ಶ್ರೀರಾಮಪುರ ಬಳಿ ಬಲಗಡೆಯ ರಸ್ತೆಗೆ ತಿರುವು ಪಡೆಯಬೇಕು. ಪಿಇಎಸ್ ಕಾಲೇಜು ಪಕ್ಕದಲ್ಲಿರುವ ಕಿಮ್ಮನೆ ಗಾಲ್ಫ್ ಕ್ಲಬ್ ತಿರುವಿನವರೆಗೆ ಬಲ ಬದಿಯಲ್ಲೆ ತೆರಳಿ ಅಲ್ಲಿಂದ ಎಡ ಭಾಗದ ರಸ್ತೆಯಲ್ಲಿ ಸಂಚರಿಸಬೇಕು. ಆಯನೂರು ಕಡೆಯಿಂದ ಶಿವಮೊಗ್ಗದ ಕಡೆಗೆ ಬರುವ ವಾಹನಗಳು ಪಿಇಎಸ್ ಕಾಲೇಜಿನ ತನಕ ಎಡ ಬದಿಯಲ್ಲಿರುವ ವಿಶಾಲ ರಸ್ತೆಯನ್ನು ಸಂಪೂರ್ಣ ಬಳಕೆ ಮಾಡಬಹುದು. ಪಿಇಎಸ್ ಕಾಲೇಜಿನಿಂದ ಮುಂದೆ ಸುಮಾರು ಅರ್ಧ ಕಿ.ಮೀ.ವರೆಗೆ ಸಂಪೂರ್ಣ ಎಡ ಬದಿಯಲ್ಲಿ ಸಂಚರಿಸಬೇಕು.
ಗೊಂದಲದಿಂದ ಅಪಘಾತ
ನಿತ್ಯ ಓಡಾಡುವವರಿಗೆ ಒನ್ ವೇ ಸಂಚಾರದ ಬಗ್ಗೆ ಗೊತ್ತಿದೆ. ಆದರೆ ಬಿ.ಹೆಚ್.ರಸ್ತೆಯ ಹೆದ್ದಾರಿಯಲ್ಲಿ (Highway) ಪ್ರತಿದಿನ ಬೇರೆ ಊರುಗಳಿಂದಲು ಓಡಾಡುವವರಿದ್ದಾರೆ. ತ್ಯಾವರೆಕೊಪ್ಪದಿಂದ ಸಂಪೂರ್ಣ ಡಬಲ್ ರಸ್ತೆ ಇದ್ದು, ಶ್ರೀರಾಮಪುರ ಬಳಿ ಏಕಾಏಕಿ ಸಿಂಗಲ್ ಸೈಡ್ನಲ್ಲಿ ಟೂ ವೇ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದು ಗೊತ್ತಾಗದೆ ಅಪಘಾತ ಸಂಭವಿಸುತ್ತಿವೆ. ಕಾಮಗಾರಿಯ ಬಗ್ಗೆಯಾಗಲಿ, ಒನ್ ಸೈಡ್ನಲ್ಲಿ ಟೂ ವೇ ಸಂಚಾರದ ಸೂಚನೆ ನೀಡುವ ಫಲಕವೆ ಇಲ್ಲಿಲ್ಲ. ಇದೆ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ.
ರಾತ್ರಿ ವೇಳೆ ಡಬಲ್ ಕನ್ಫ್ಯೂಷನ್
ರಾತ್ರಿ ಹೊತ್ತು ಈ ರಸ್ತೆಯಲ್ಲಿ ವಾಹನ ಸಂಚಾರ ಅಷ್ಟು ಸುಲಭದ್ದಲ್ಲ. ಡಿವೈಡರ್ಗಳ ಮೇಲೆ ಬೀದಿ ದೀಪಗಳಿಲ್ಲ. ಗಾಳಿ, ಮಳೆಗೆ ವೇಗ ಮಿತಿ, ತಿರುವುಗಳ ಮಾಹಿತಿ ನೀಡುವ ಸೂಚನಾ ಫಲಕಗಳೆಲ್ಲ ಡಿವೈಡರ್ಗಳ ಮೇಲೆ ಬಿದ್ದಿವೆ. ಇವುಗಳ ಕಾರಣಕ್ಕೆ ನಿತ್ಯ ಅಪಘಾತವಾಗುತ್ತಿದೆ ಎಂಬ ಆರೋಪವಿದೆ.
ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ನಿತ್ಯ ಇದೆ ರಸ್ತೆಯಲ್ಲಿ ಓಡಾಡುತ್ತಾರೆ. ಪ್ರತಿದಿನ ಜೀವ ಕೈಯ್ಯಲ್ಲಿ ಹಿಡಿದು ಮಕ್ಕಳು ರಸ್ತೆಗಿಳಿಯಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಚನಾ ಫಲಕಗಳನ್ನು ಅಳವಡಿಸಬೇಕಿದೆ. ಒನ್ ವೇ ಸಂಚಾರದ ರಸ್ತೆಯಲ್ಲಿ ರಿಫ್ಲೆಕ್ಟರ್ ಹೊಂದಿರುವ ಪ್ಲಾಸ್ಟಿಕ್ ರೋಡ್ ಡಿವೈಡರ್ಗಳನ್ನು ಅಳವಡಿಸಬೇಕಿದೆ.
ತ್ಯಾವರೆಕೊಪ್ಪದ ಕಡೆಯಿಂದ ಬರುವ ವಾಹನಗಳ ಚಾಲಕರಿಗೆ ಮುಂದೆ ರಸ್ತೆಯ ಒಂದೇ ಬದಿಯಲ್ಲಿ ಟೂ ವೇ ಸಂಚಾರವಿದೆ ಎಂಬ ಮಾಹಿತಿ ನೀಡುವ ಬೋರ್ಡ್ ಹಾಕಬೇಕಿದೆ. ಇದರಿಂದ ಮತ್ತಷ್ಟು ಸಾವು – ನೋವು ತಪ್ಪಿಸಬಹುದಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422