ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಸಾಗರ ತಾಲೂಕು ಗುಡ್ಡೆಕೌತಿ ಬಳಿ ಮೈಸೂರು – ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿದೆ. ರೈಲ್ವೆ ಪೊಲೀಸರು ವ್ಯಕ್ತಿಯ ಮಾಹಿತಿ ಕಲೆ ಹಾಕಿ, ಆತನ ಸಂಬಂಧಿಕರಿಗೆ ವಿಚಾರ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ನಾಗನೂರು ಬಸವರಾಜ್ (36) ಎಂದು ಗುರುತಿಸಲಾಗಿದೆ.

ಸಾಗರದಲ್ಲಿ ಬಿ.ಹೆಚ್.ರಸ್ತೆಯಲ್ಲಿ ಬಸವರಾಜ್‍ ಅವರು ನಂದಿನಿ ಹಾಲಿನ ಬೂತ್ ನಡೆಸುತ್ತಿದ್ದರು. ರೈಲಿಗೆ ಸಿಲುಕಿ ಸಾವನ್ನಪ್ಪಲು ಕಾರಣವೇನು ಎಂಬುದರ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ವ್ಯಕ್ತಿ ಸಾವು, ರುಂಡ, ಮುಂಡ ಬೇರೆಯಾಗಿ ಹಳಿ ಮೇಲೆ ಬಿದ್ದಿತ್ತು ಮೃತದೇಹ

ಗುಡ್ಡೆಕೌತಿ ಬಳಿ ರೈಲ್ವೆ ಹಳಿ ಮೇಲೆ ಬಸವರಾಜ್ ಮೃತದೇಹ ಪತ್ತೆಯಾಗಿತ್ತು. ರುಂಡ, ಮುಂಡ ಬೇರೆಯಾದ ಸ್ಥಿತಿಯಲ್ಲಿ ಬಸವರಾಜ್ ಮೃತದೇಹ ಪತ್ತೆಯಾಗಿತ್ತು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment