ಕಂಠಮಟ್ಟ ಕುಡಿದು ಹೊಟ್ಟೆ ತುಂಬಾ ಊಟ ಮಾಡಿ ಬಿಲ್‌ ಕೇಳಿದಾಗ ಬಿಯರ್‌ ಬಾಟಲಿಯಿಂದ ದಾಳಿ

ಶಿವಮೊಗ್ಗ: ಬಾರ್ ಒಂದರಲ್ಲಿ ಮದ್ಯ ಮತ್ತು ಊಟದ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ನಾಲ್ವರು ವ್ಯಕ್ತಿಗಳು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ (dispute). ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ : ಊಟ ಮುಗಿಸಿ ಹಾಸ್ಟೆಲ್‌ನ ರೂಂಗೆ ಬಂದ ಇಂಜಿನಿಯರಿಂಗ್‌ ವಿದ್ಯಾರ್ಥಿಗೆ ಕಾದಿತ್ತು ಆಘಾತ

Shivamogga-Police-Jeep

ಅಬ್ಬಲಗೆರೆಯ ದುರ್ಗಾ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಾಲ್ವರು ವ್ಯಕ್ತಿಗಳು ಮದ್ಯ ಸೇವಿಸಿ, ಊಟ ಮಾಡಿದ್ದರು. ಇದರ ಬಿಲ್‌ ಮೊತ್ತ ₹3000 ಆಗಿತ್ತು. ಮೊತ್ತ ಪಾವತಿಸುವಂತೆ ಬಾರ್‌ನ ಕಿಚನ್‌ ವಿಭಾಗದ ಉಸ್ತುವಾರಿ ಕೃಷ್ಣಮೂರ್ತಿ ಕೇಳಿದರು. ಆಗ ಹಣ ನೀಡಲು ನಿರಾಕರಿಸಿದ ನಾಲ್ವರು, ಗಲಾಟೆ ಆರಂಭಿಸಿದರು. ಜಗಳ ಬಿಡಿಸಲು ಬಂದ ಕೃಷ್ಣಮೂರ್ತಿ ಅವರ ಮಗ ಅಕ್ಷಯ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದ ಆರೋಪಿಸಲಾಗಿದೆ.

Shivamogga-Police-Jeep

ಆರೋಪಿಗಳು ಬೀಯರ್ ಬಾಟಲಿ ಮತ್ತು ಕೋಲಿನಿಂದ ಹೊಡೆದು ತಂದೆ-ಮಗನಿಗೆ ಗಾಯಗೊಳಿಸಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment