ವಿದ್ಯಾನಗರದಲ್ಲಿ ಡಾಕ್ಟರ್‌ ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿದ ಕಳ್ಳರು

SHIVAMOGGA LIVE NEWS | 30 OCTOBER 2023

SHIMOGA : ವೈದ್ಯರೊಬ್ಬರ (Doctor) ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ನಗದು ಮತ್ತು ಸಿಸಿಟಿವಿ ಕ್ಯಾಮರಾದ ಡಿವಿಆರ್‌ ಕಳ್ಳತನ (Theft) ಮಾಡಿ ಪರಾರಿಯಾಗಿದ್ದಾರೆ. ವಿದ್ಯಾನಗರದಲ್ಲಿ ಘಟನೆ ಸಂಭವಿಸಿದ್ದು ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vidyanagara-Smart-city-board

ವಿದ್ಯಾನಗರದಲ್ಲಿರುವ ಡಾ. ವಿನಯ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಹಿಂಬದಿಯ ಕಬ್ಬಿಣದ ಗೇಟ್‌ ಮೂಲಕ ಕಳ್ಳರು ಒಳ ನುಗ್ಗಿದ್ದಾರೆ. ಹಿಂಬದಿಯ ಬಾಗಿಲಿನ ಚಿಲಕ ಮುರಿದು ಮನೆಯೊಳಗೆ ನುಸುಳಿದ್ದಾರೆ. ಬೆಡ್‌ ರೂಂನ ಬೀರುವಿನಲ್ಲಿದ್ದ 25 ಸಾವಿರ ರೂ. ನಗದು ಕಳ್ಳತನ ((Theft)) ಮಾಡಿದ್ದಾರೆ. ಇನ್ನು, ಸಿಸಿಟಿವಿ ಡಿವಿಎಆರ್‌ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ- ಮೋರಿ ಕಟ್ಟೆ ಮೇಲೆ ಹತ್ತಿದ ಸಿಗಂದೂರು – ಸಾಗರ ಕೆಎಸ್‌ಆರ್‌ಟಿಸಿ ಬಸ್‌, ಘಟನೆಗೇನು ಕಾರಣ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment