ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021
ವೈದ್ಯರೊಬ್ಬರ ಮನೆ ಕಾಂಪೌಂಡ್’ನಲ್ಲಿದ್ದ ನಾಯಿ ಮರಿ ಕಳ್ಳತನ ಮಾಡಿದ್ದವರನ್ನು, ಪೊಲೀಸರು ಬಂಧಿಸಿದ್ದಾರೆ. ನಾಯಿ ಕಳುವಾಗಿ 12 ಗಂಟೆಯೊಳಗೆ ನಾಯಿಯನ್ನು ಪತ್ತೆ ಮಾಡಲಾಗಿದೆ. ನಾಯಿ ಕದ್ದಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ರಾಜೇಂದ್ರ ನಗರದಲ್ಲಿರುವ ಡಾ.ಪರಮೇಶ್ವರ್ ಅವರು ಆರು ತಿಂಗಳ ಹಿಂದೆ ಬೀಗಲ್ ತಳಿಯ ನಾಯಿ ಮರಿ ಖರೀದಿಸಿದ್ದರು. ಭಾನುವಾರ ಮಧ್ಯಾಹ್ನ ಡಾ.ಪರಮೇಶ್ವರ್ ಮತ್ತು ಅವರು ಪತ್ನಿ ಮಲಗಿದ್ದರು. ನಾಯಿ ಮರಿ ಮನೆಯ ಕಾಂಪೌಂಡ್ ಒಳಗೆ ಓಡಾಡುತಿತ್ತು. ಸಂಜೆ ಮನೆಯಿಂದ ಹೊರ ಬಂದ ಡಾ.ಪರಮೇಶ್ವರ್ ಅವರಿಗೆ ನಾಯಿ ಮರಿ ಕಾಣಿಸಲಿಲ್ಲ.
ಸಿಸಿಟಿವಿಯಲ್ಲಿ ಕಳ್ಳತನ ಸೆರೆ
ನಾಯಿ ಕಾಣದಿರುವ ಹಿನ್ನೆಲೆ ಡಾ.ಪರಮೇಶ್ವರ್ ಅವರು ತಮ್ಮ ಮನೆ ಮತ್ತು ಎದುರು ಮನೆಯ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದರು. ಬೈಕ್’ನಲ್ಲಿ ಬಂದ ಇಬ್ಬರು ಯುವಕರು ಡಾ. ಪರಮೇಶ್ವರ್ ಅವರ ಮನೆಯಲ್ಲಿದ್ದ ನಾಯಿಯನ್ನು ಕದ್ದೊಯ್ಯುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ಡಾ. ಪರಮೇಶ್ವರ್ ಅವರು ದೂರು ನೀಡಿದ್ದರು.
ಇದನ್ನೂ ಓದಿ | ನಾಲ್ಕು ಹಸುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೈತ, ಕಂಪ್ಲೇಂಟ್’ನಲ್ಲಿ ಏನಿದೆ?
12 ಗಂಟೆಯೊಳಗೆ ಕಳ್ಳರು ಅರೆಸ್ಟ್
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ನಾಯಿ ಮರಿ ಮತ್ತು ಒಂದು ಬೈಕನ್ನು ವಶಕ್ಕೆ ಪಡೆಯಲಾಗಿದೆ. ನಾಯಿ ಮರಿ ವಾರಸುದಾರರ ಮಡಿಲು ಸೇರಿದೆ.
ಜಯನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






