SHIVAMOGGA LIVE NEWS | 23 FEBRURARY 2023
SHIMOGA : ವಿದ್ಯಾರ್ಥಿನಿಯೊಬ್ಬಳ ಫೋಟೊಗಳನ್ನು ಎಡಿಟ್ (Edited Photo) ಮಾಡಿ ಆಶ್ಲೀಲವಾಗಿ ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ ಲೋಡ್ ಮಾಡಲಾಗಿದೆ. ‘ನೀನು ನಿನ್ನ ಕುಟುಂಬದವರು ಸಾಯುವ ತನಕ ಇದು ಮುಂದುವರೆಯಲಿದೆ’ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ದಾಖಲು ಮಾಡಿದ್ದಾಳೆ.
ಏನಿದು ಪ್ರಕರಣ?
ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿಯ (ಹೆಸರು ಗೌಪ್ಯ) ಇನ್ಸ್ಟಾಗ್ರಾಂ ಖಾತೆಗೆ ಫೆ.11ರಂದು ಸಂಜೆ ಮತ್ತೊಂದು ಇನ್ಸ್ಟಾಗ್ರಾಂ ಖಾತೆಯಿಂದ ರಿಕ್ವೆಸ್ಟ್ ಬಂದಿದೆ. ಪರಿಚಿತರೋ, ಸಂಬಂಧಿಯೋ ಇರಬೇಕು ಎಂದು ವಿದ್ಯಾರ್ಥಿನಿ ರಿಕ್ವೆಸ್ಟ್ ಗೆ ಒಪ್ಪಿಗೆ ಸೂಚಿಸಿದ್ದಾರೆ. ಮರುದಿನ ವಿದ್ಯಾರ್ಥಿನಿಯ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ (Edited Photo) ಮಾಡಿ ಆ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿತ್ತು.
ಇದನ್ನೂ ಓದಿ – ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಮತ್ತೆ ಪೌಡರ್ ಗ್ಯಾಂಗ್ ಪ್ರತ್ಯಕ್ಷ, ಮಹಿಳೆಗೆ ವಂಚನೆ
ಈ ಫೋಟೊಗಳನ್ನು ವಿದ್ಯಾರ್ಥಿನಿಯ ಸಂಬಂಧಿಗಳಿಗು ಕಳುಹಿಸಲಾಗಿತ್ತು. ‘ನೀನು, ನಿನ್ನ ಕುಟುಂಬದವರು ಸಾಯುವವರೆಗೂ ನಾನು ಈ ರೀತಿ ಮಾಡುವುದು ನಿಲ್ಲಿಸುವುದಿಲ್ಲ’ ಎಂದು ಬೆದರಿಕೆಯ ಮೆಸೇಜನ್ನು ಕಳುಹಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ‘ರಾತ್ರಿ 11 ಗಂಟೆಗೆ ಮನೆ ಕರೆಂಟ್ ಕಟ್’, SMS ನಂಬಿದ ಶಿವಮೊಗ್ಗದ ಡಾಕ್ಟರ್ ಗೆ ಕಾದಿತ್ತು ದೊಡ್ಡ ಆಘಾತ
ಫೋಟೊಗಳ ಬಗ್ಗೆ ಇರಲಿ ನಿಗಾ
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವಿಡಿಯೋಗಳನ್ನು ಷೇರ್ ಮಾಡುವಾಗ ಎಚ್ಚರವಿರಲಿ. ವೈಯಕ್ತಿಕ ಹಗೆ ತೀರಿಸಿಕೊಳ್ಳುವುದು, ಹಣ ಅಥವಾ ಇತರೆ ಉದ್ದೇಶಕ್ಕೆ ಬ್ಲಾಕ್ ಮೇಲ್ ಮಾಡಲು ಫೋಟೊಗಳನ್ನು ಎಡಿಟ್ ಮಾಡಿ, ಕಿಡಿಗೇಡಿಗಳು ದುರುಪಯೋಗ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಯುವತಿಯರು, ಮಹಿಳೆಯರು ಹೆಚ್ಚು ನಿಗಾ ವಹಿಸುವುದು ಅಗತ್ಯ. ಅಲ್ಲದೆ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಗೆ ಒಪ್ಪಿಗೆ ಕೊಡುವಾಗ ಎಚ್ಚರ ವಹಿಸಬೇಕಿದೆ.