ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ನವೆಂಬರ್ 2019
ಗೋವಾ ಮದ್ಯ ಸಾಗಣೆ ಮಾಡುತ್ತಿದ್ದ ತರಕಾರಿ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಚೋರಡಿ ಬಳಿ ಇವತ್ತು ಬೆಳಗಿನ ಜಾವ ವಾಹನ ತಡೆದು ತಪಾಸಣೆ ನಡೆಸಿ ಮದ್ಯ ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ತರಕಾರಿ ಲಾರಿಯಲ್ಲಿ ಗೋವಾದ ಮದ್ಯವನ್ನು ಅಕ್ರವಾಗಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಚೋರಡಿ ಬಳಿ ಲಾರಿಯನ್ನು ತಡೆದು, ತಪಾಸಣೆ ನಡೆಸಲಾಯಿತು. ಲಾರಿಯಲ್ಲಿ 20 ಸಾವಿರ ಮೌಲ್ಯದ 22 ಲೀಟರ್ ಮದ್ಯವಿತ್ತು ಎಂದು ಹೇಳಲಾಗುತ್ತಿದೆ. ಚಾಲಕ ಗಿರೀಶ್, ಕ್ಲೀನರ್ ಮನುಕುಮಾರ್ ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೀಜ್ ಮಾಡಲಾದ ಮದ್ಯ ಮತ್ತು ಲಾರಿಯ ಮೌಲ್ಯ ಒಟ್ಟು 12.20 ಲಕ್ಷ ಮೌಲ್ಯ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಬಕಾರಿ ಉಪ ಆಯುಕ್ತೆ ರೂಪಾ ಅವರ ನಿರ್ದೇಶನದ ಮೇರೆಗೆ ವಿಚಕ್ಷಣ ದಳದ ನಿರೀಕ್ಷಕರಾದ ಹನುಮಂತಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಉಪನಿರೀಕ್ಷಕ ಹಾಲಾನಾಯ್ಕ್, ಸಿಬ್ಬಂದಿಗಳಾದ ಎಸ್.ಡಿ.ಚಂದ್ರಪ್ಪ, ರವೀಂದ್ರ ಪಾಟೀಲ್, ಅರ್ಜುನ್ ಕಾರ್ಯಾಚರಣೆ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422