ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಅಡಿ ಮನೆ ಕಟ್ಟಲು ಸಾಲ (Housing Loan) ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಗೆ ₹3,36,000 ವಂಚಿಸಲಾಗಿದೆ.

ಮೋಸ ಆಗಿದ್ದು ಹೇಗೆ?

ಅಕ್ಟೋಬರ್ 27ರಂದು ಶಿವಮೊಗ್ಗದ ರೈತರೊಬ್ಬರ (Farmer) ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ವಾಟ್ಸ್‌ಆ್ಯಪ್ ಮೆಸೇಜು (Whatsapp) ಮತ್ತು ಕರೆಗಳು ಬಂದಿದ್ದವು. ವಂಚಕರ ಪೈಕಿ ಒಬ್ಬರು ತಮ್ಮನ್ನು ಪ್ರಿಯಾ ಕುಮಾರಿ ಎಂದು ಪರಿಚಯಿಸಿಕೊಂಡು, ಮನೆ ಕಟ್ಟಲು ₹20 ಲಕ್ಷ ಸಾಲ (Loan) ನೀಡುವುದಾಗಿ ಹೇಳಿದ್ದರು.

ಸಾಲ ಮಂಜೂರಾಗುತ್ತದೆ ಎಂದು ನಂಬಿಸಿ, ವಂಚಕರು ಅಕೌಂಟ್ ಮಾಡಿಸಬೇಕು, ಇನ್ಶೂರೆನ್ಸ್ (Insurance) ಕಟ್ಟಬೇಕು ಮತ್ತು ಇತರೆ ಕಾರಣಗಳು ಎಂದು ಹೇಳಿ ಹಂತ ಹಂತವಾಗಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಉಮೇಶಪ್ಪ ಅವರಿಂದ ಒಟ್ಟು  ₹3,36,000 ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

Online-Fraud-In-Shimoga

ಇದನ್ನೂ ಓದಿ » ಕೊನೆಗೂ ಎಚ್ಚೆತ್ತ ಅಧಿಕಾರಿಗಳು, ಶಿವಮೊಗ್ಗ ಲೈವ್‌ ನಿರಂತರ ವರದಿ ಬಳಿಕ ರಸ್ತೆ ಗುಂಡಿಗಳು ಬಂದ್‌

ಸಾಲದ ಹಣದ ಕುರಿತು ವಿಚಾರಿಸಲು ಕರೆ ಮಾಡಿದಾಗ, ವಂಚಕರು ಕೆವೈಸಿ (KYC) ಮಾಡಿಸಬೇಕು ಎಂದು ವಿಳಂಬ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಉಮೇಶಪ್ಪ, ಪರಿಚಯಸ್ಥರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದುಬಂದಿದೆ.

ಘಟನೆ ಸಂಬಂಧ ಶಿವಮೊಗ್ಗ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment