ಹೊಸನಗರದಲ್ಲಿ ತಂದೆಯಿಂದಲೇ ಮಗನಿಗೆ ಚಾಕು ಇರಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | HOSANAGARA NEWS | 10 ಫೆಬ್ರವರಿ 2022

ಸಾರ್ವಜನಿಕ ಸ್ಥಳದಲ್ಲಿ ತಂದೆಯೇ ಮಗನಿಗೆ ಚಾಕುವಿನಿಂದ ಇರಿದ್ದಿದ್ದಾರೆ. ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

Nanjappa Hospital Covid Care Center

ತೀರ್ಥೇಶ್ (33) ಗಾಯಗೊಂಡಿರುವವರು. ತಂದೆ ರಾಜಪ್ಪಗೌಡ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಹೊಸನಗರದ ಗೊರಗೋಡು ಗ್ರಾಮದಲ್ಲಿ ತೀರ್ಥೇಶ್ ಅವರು ಕೆಲಸದ ನಿಮಿತ್ತ ಹೊಸನಗರಕ್ಕೆ ಬಂದಿದ್ದರು. ಇಲ್ಲಿನ ಹೊಟೇಲ್ ಒಂದರಲ್ಲಿ ತೀರ್ಥಶ್ ಊಟ ಮಾಡುತ್ತಿದ್ದಾಗ ತಂದೆ ರಾಜಪ್ಪಗೌಡ ಬಂದು ಗಲಾಟೆ ಮಾಡಿದ್ದಾರೆ. ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಚಾಕು ತೆಗೆದು ತೀರ್ಥೇಶ್’ಗೆ ತಿವಿದಿದ್ದಾರೆ.

ಗಾಯಗೊಂಡಿದ್ದ ತೀರ್ಥೇಶ್ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Live Website Reach

Shimoga District ProfileAbout Shivamogga Live | Shivamogga Live WhatsApp Number 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment