ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ

Published On : ಫೆಬ್ರವರಿ 10, 2022

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಫೆಬ್ರವರಿ 2022

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ.

Nanjappa Hospital Cancer Center

ಉದ್ಯಮಿ ರಂಗನಾಥ ಎಂಬುವವರು ವಂಚನೆ ಒಳಗಾಗಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ಚಿಕ್ಕಣ್ಣ ಎಂಬಾತ ವಂಚನೆ ಮಾಡಿದ್ದಾನೆ. ಆತ ಆಂಧ್ರದ ಅನಂತಪುರ ಜಿಲ್ಲೆಯ ಹೇಮಾವತಿ ತಾಲೂಕಿನವನು.

ವಂಚನೆ ಆಗಿದ್ದು ಹೇಗೆ?

2019ರಲ್ಲಿ ರಂಗನಾಥ ಅವರಿಗೆ ಚಿಕ್ಕಣ್ಣ ಎಂಬುವವರ ಪರಿಚಯವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಯಾವುದೆ ಕೆಲಸ ಬೇಕಿದ್ದರೂ ಕೊಡಿಸುವುದಾಗಿ ಚಿಕ್ಕಣ್ಣ ನಂಬಿಸಿದ್ದ. ಅದರಂತೆ ಇತ್ತೀಚೆಗೆ ರಂಗನಾಥ ಅವರು ಒಂದು ಕೆಲಸಕ್ಕಾಗಿ ಚಿಕ್ಕಣ್ಣನ ನೆರವು ಕೇಳಿದ್ದರು.

ಕೆಲಸ ಆಗಬೇಕಿದ್ದರೆ ಹಣ ಕೊಡಬೇಕು ಎಂದು ಚಿಕ್ಕಣ್ಣ ತಿಳಿಸಿದ್ದರಿಂದ ರಂಗನಾಥ ಅವರು ಹಣ ವರ್ಗಾಯಿಸಿದ್ದರು. ಒಟ್ಟು 87.53 ಲಕ್ಷ ರೂ. ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು.

ಅದರೆ ಚಿಕ್ಕಣ್ಣ ಕೆಲಸ ಮಾಡಿಕೊಡದ ಹಿನ್ನೆಲೆ ಹಣವನ್ನು ಹಿಂತಿರುಗಿಸುವಂತೆ ರಂಗನಾಥ ಅವರು ಒತ್ತಡ ಹೇರಿದ್ದಾರೆ. ಆಗ 16.90 ಲಕ್ಷ ರೂ. ಹಣವನ್ನು ಹಿಂತಿರುಗಿಸಿದ್ದಾನೆ.

ಉಳಿದ 70.63 ಲಕ್ಷ ರೂ. ಹಣ ಬಾಕಿ ಉಳಿಸಿಕೊಂಡಿದ್ದ ಚಿಕ್ಕಣ್ಣ, ದಿಢೀರನೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ರಂಗನಾಥ ಅವರು ದೂರು ನೀಡಿದ್ದಾರೆ.

ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಸಾಗರದಲ್ಲಿ ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು ನಿಲುಗಡೆ ಸಮಯ ಹೆಚ್ಚಳ

Shivamogga Live News Website Reach

About Shivamogga LiveShimoga Police | Shimoga Live Whatsapp 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 10, 2022

Leave a Comment