ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ 15 ಆರೋಪಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಸೀರ್(25), ಗಣೇಶ(23), ಅಹಮದ್ ವಜೀದ್(27), ಮೋಹನ್(37), ರಫೀಕ್ ಅಹಮದ್ (40), ರಮೇಶ್(24), ಅಂಜು ಅಲಿಯಾಸ್ ಮಹಮದ್ ಅಶ್ರಫ್ (31), ಶಾಹಿದ್ (30), ಅಮ್ಜಾದ್ ಅಲಿಯಾಸ್ ಅಮ್ಜು (30), ಅಪ್ಸರ್ ಪಾಷ (35), ವೆಂಕಟೇಶ (30), ತಿರುಮಲೇಶ್ (26), ತಬ್ರೇಜ್ (24), ಅರುಣ (28), ಚಂದ್ರಾ ನಾಯ್ಕ (57) ಬಂಧಿತರು.
ತುಂಗಾನಗರ ಠಾಣೆಯಲ್ಲಿ ಈ ಆರೋಪಿಗಳ ವಿರುದ್ದ ವಿವಿಧ ಪ್ರಕರಣಗಳು ದಾಖಲಾಗಿದ್ದವು. ನ್ಯಾಯಾಯಲದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಕಳೆದ ಒಂದು ವಾರದಲ್ಲಿ ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನೆಲ್ಲ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ತುಂಗಾನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಹಾಗೂ ಪಿಎಸ್‌ಐ ತಿರುಮಲೇಶ್ ರವರ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ ಸೋಮಾನಾಯ್ಕ್ ಆರ್, ಪಿಸಿ ಪ್ರಶಾಂತ್, ಕೊಟ್ರೇಶ್ ಹಾಗೂ ಮಾಲತೇಶ್ ಕಾರ್ಯನಿರ್ವಹಿಸಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com


