ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 FEBRUARY 2024
BHADRAVATHI : ಗ್ರಾಹಕರಿಂದ ಸಂಗ್ರಹಿಸಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್ ಸಂಸ್ಥೆಗೆ ಪಾವತಿಸದೆ, ಸಿಬ್ಬಂದಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಆರೋಪದ ಹಿನ್ನೆಲೆ ನಾಲ್ವರು ಸಿಬ್ಬಂದಿ ವಿರುದ್ಧ ಫೈನಾನ್ಸ್ ಸಂಸ್ಥೆಯ (ಹೆಸರು ಗೌಪ್ಯ) ಬ್ರ್ಯಾಂಚ್ ಮ್ಯಾನೇಜರ್ ದೂರು ನೀಡಿದ್ದಾರೆ.
ಭದ್ರಾವತಿಯಲ್ಲಿರುವ ಫೈನಾನ್ಸ್ ಸಂಸ್ಥೆಯೊಂದು ನೂರುಕ್ಕೂ ಹೆಚ್ಚು ಮಹಿಳಾ ಸಂಘಗಳಿಗೆ ಸಾಲ ನೀಡಿತ್ತು. ಗ್ರಾಹಕರಿಂದ ಸಾಲದ ಕಂತು ಸಂಗ್ರಹಿಸಿ ಫೈನಾನ್ಸ್ ಸಂಸ್ಥೆಗೆ ಕಟ್ಟಲು ಸಿಬ್ಬಂದಿ ನೇಮಿಸಿಕೊಳ್ಳಲಾಗಿತ್ತು. ಇವರು 22 ಗ್ರಾಹಕರಿಂದ ಸಾಲದ ಹಣ ಸಂಗ್ರಹಿಸಿ ಫೈನಾನ್ಸ್ ಸಂಸ್ಥೆಗೆ ಪಾವತಿಸಿರಲಿಲ್ಲ. ಆಡಿಟ್ ವೇಳೆ 4.37 ಲಕ್ಷ ರೂ. ವ್ಯತ್ಯಾಸ ಕಂಡು ಬಂದಿತ್ತು. ವಿಚಾರಣೆ ನಡೆಸಿದಾಗ ನಾಲ್ವರು ಸಿಬ್ಬಂದಿ ಹಣವನ್ನು ಸ್ವಂತಕ್ಕೆ ಬಳಸಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ – ರೈಲ್ವೆ ಇಲಾಖೆಯಲ್ಲಿ ಕೆಲಸ, ‘ಇನ್ನೇನು ಬಂದೇ ಬಿಡ್ತು ಆದೇಶ’, ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ದೋಖ
ಸಂಸ್ಥೆಯ ಹಣವನ್ನು ಸ್ವಂತಕ್ಕೆ ಬಳಸಿ, ಅದನ್ನು ಹಿಂತಿರುಗಿಸದ ನಾಲ್ವರು ಸಿಬ್ಬಂದಿ ವಿರುದ್ಧ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದಾರೆ. ಕರಿಬಸವ, ಪ್ರದೀಪ್, ರಾಘವೇಂದ್ರ ಮತ್ತು ವಿದ್ಯಾಸಾಗರ ಎಂಬುವವರ ವಿರುದ್ಧ ಭದ್ರಾವತಿ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422