ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 JANUARY 2024
SHIMOGA : ಎರಡು ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದು ಫೇಸ್ಬುಕ್ನಲ್ಲಿದ್ದ ಜಾಹೀರಾತು ನಂಬಿ ಕರೆ ಮಾಡಿದ್ದ ಭದ್ರಾವತಿ ಯುವಕನಿಗೆ (ಹೆಸರು ಗೌಪ್ಯ) 36,500 ರೂ. ವಂಚನೆಯಾಗಿದೆ.
ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್ಗೆ ಭದ್ರಾವತಿಯ ಯುವಕ ಕರೆ ಮಾಡಿದ್ದ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ತಾವು ಮಂಗಳೂರಿನ ಫೈನಾನ್ಸ್ ಸಂಸ್ಥೆ ಎಂದು ಪರಿಚಯಿಸಿಕೊಂಡಿದ್ದ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ವಿವರ, ಪ್ಯಾನ್ ಕಾರ್ಡ್ ವಾಟ್ಸಪ್ ಮಾಡುವಂತೆ ತಿಳಿಸಿದ್ದ. ದಾಖಲೆಗಳನ್ನು ಕಳುಹಿಸುತ್ತಿದ್ದಂತೆ ಸಾಲ ಸ್ಯಾಂಕ್ಷನ್ ಆಗಿದೆ. ಇದರ ಪ್ರೋಸೆಸ್ ಫೀಜ್, ಟ್ಯಾಕ್ಸ್ ಸೇರಿದಂತೆ ನಾನಾ ಕಾರಣಕ್ಕೆ 36,500 ರೂ. ಪಾವತಿಸಬೇಕು ಎಂದು ತಿಳಿಸಿದ್ದ.
ಇದನ್ನೂ ಓದಿ – ಹೆಂಡತಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಂದ ಗಂಡ
ಇದನ್ನು ನಂಬಿದ ಭದ್ರಾವತಿ ಯುವಕ 36,500 ರೂ. ಪಾವತಿಸಿದ್ದ. ಆದರೂ ಸಾಲದ ಹಣ ಬಾರದಿದ್ದಾಗ ವಂಚನೆಗೊಳಗಾಗಿದ್ದು ಅರಿವಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422