ಬೈಕ್‌ ಚಲಾಯಿಸಿದ್ದು ಮಗ, ತಾಯಿ ವಿರುದ್ಧ ಕೇಸ್‌, ₹26,500 ದಂಡ, ಕಾರಣವೇನು?

ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ವಾಹನದ ಮಾಲೀಕರಿಗೆ ₹26,500 ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಅಕ್ಟೋಬರ್ 9ರ ಸಂಜೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸ್ವಪ್ನ.ಎಲ್ ಹಾಗೂ ಸಿಬ್ಬಂದಿ ಸೂರ್ಯನಾಯ್ಕ ಮತ್ತು ಮೊಹಮ್ಮದ್ ಫಾರೂಕ್ ಅವರು ನಗರದ ಆಲ್ಕೊಳ ಸರ್ಕಲ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ರಸ್ತೆ ಕಡೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಸಾಗುತ್ತಿದ್ದ ಟಿವಿಎಸ್ ಜುಪಿಟರ್ ಸ್ಕೂಟರ್ ಅನ್ನು ತಡೆದು ಪರಿಶೀಲಿಸಿದ್ದರು.

fine-imposed-on-the-vehicle-owner-for-allowing-a-minor-to-drive

ತಪಾಸಣೆ ವೇಳೆ ವಾಹನದ ಆರ್‌ಸಿ ಮಾಲೀಕರು ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಚಲಾಯಿಸಲು ನೀಡಿರುವುದು ದೃಢಪಟ್ಟ ಹಿನ್ನೆಲೆ, ಅವರ ವಿರುದ್ಧ ಲಘು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನಗರದ 4ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ವಾಹನದ ಮಾಲೀಕರಿಗೆ ₹26,500 ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಪೊಲೀಸ್‌ ಇಲಾಕೆ ಪ್ರಕಟಣೆಯಲ್ಲಿ ತಿಳಿಸಿದೆ.