ಶಿವಮೊಗ್ಗದಲ್ಲಿ ಗ್ಯಾಸ್ ಏಜೆನ್ಸಿ ಕೊಡಿಸುವುದಾಗಿ ನಂಬಿಸಿ ಐದು ಲಕ್ಷ ರೂ. ವಂಚನೆ

ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಗ್ಯಾಸ್ ಏಜೆನ್ಸಿ ಕೊಡಿಸುವುದಾಗಿ ನಂಬಸಿ ವಂಚನೆ ಮಾಡಿರುವ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಮನೆ ಬಡಾವಣೆಯ ಮಹಿಳೆಯೊಬ್ಬರಿಗೆ ಖಾಸಗಿ ಎಲ್‍ಪಿಜಿ ಗ್ಯಾಸ್ ಏಜೆನ್ಸಿ ಕೊಡಿಸುವುದಾಗಿ ನಂಬಿಸಿ, ಹಣ ಪಡೆಯಲಾಗಿದೆ. ಮೊದಲಿಗೆ ಎರಡು ಲಕ್ಷ, ಬಳಿಕ ಮೂರು ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.

Nanjappa Hospital Advertisement

ಎಲ್‍ಪಿಜಿ ಗ್ಯಾಸ್ ಕಂಪನಿಯ ಏಜೆನ್ಸಿ ಕೊಡಿಸುವುದಾಗಿ ನಂಬಿಸಿ, ಹೊಸಮನೆ ಬಡಾವಣೆಯ ಮಹಿಳೆಯೊಬ್ಬರಿಂದ ಹಣ ಪಡೆಯಲಾಗಿದೆ. ಐದು ಲಕ್ಷ ರೂ. ಪಡೆದರೂ, ಏಜೆನ್ಸಿ ಕೊಡಿಸಿರಲಿಲ್ಲ. ಈ ಸಂಬಂಧ ಕರೆ ಮಾಡಿದರೆ ಹಣ ಪಡೆದಾತ ಅವಾಚ್ಯವಾಗಿ ನಿಂದಿಸುತ್ತಿದ್ದಾನೆ. ತಮಗೆ ವಂಚನೆ ಮಾಡಿರುವ ಬೆಂಗಳೂರಿನ ಶ್ರೀನಿವಾಸ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಲಾಗಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment